ದಕ್ಷಿಣ ಕನ್ನಡ ಜಿಲ್ಲೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆ ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ನಿಟಿಲಾಪುರ ನಾರಾಯಣ ರಾವ್ ವೈದಿಕ ಪ್ರಾರ್ಥನೆ ಮಾಡಿದರು. ಹಿರಿಯ ಸದಸ್ಯೆ ಪುಷ್ಪಾ ಆಚಾರ್ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿದರು. ವೈಟ್ ಫೀಲ್ಡ್ ಆಸ್ಪತ್ರೆ ಸೇವಾ ರಾಜ್ಯ ಸಂಯೋಜಕರಾದ ಚಂದ್ರಶೇಖರ ನಾಯಕ್ ಶುಭಾಶಂಸನೆಗೈದರು. ಇತ್ತೀಚೆಗೆ ಜರಗಿದ ರಾಜ್ಯ ಸಮ್ಮೇಳನದಲ್ಲಿ ಸ್ವಾಮಿಯ ಜನ್ಮ ಶತಾಬ್ದಿ ಆಚರಣೆ ಬಗ್ಗೆ ನಿರ್ಣಯಿಸಿದ ವಿಷಯಗಳ ಕುರಿತು ಜಿಲ್ಲಾಧ್ಯಕ್ಷ ಪ್ರಸನ್ನ ಎನ್ ಭಟ್ ಮಾರ್ಗದರ್ಶನ ನೀಡಿದರು.
ಜಿಲ್ಲಾ ಸಂಯೋಜಕರಾದ ಜಯರಾಮ ಭಾರದ್ವಾಜ್, ದುರ್ಗಾ ಪ್ರಸಾದ್, ಉಮೇಶ್ ಹೂಲಿ, ಮುಕ್ತಾ ಕಿಣಿ, ಶಾಂತಿ ಭಟ್, ಮೂಕಾಂಬಿಕಾ ರಾವ್ ಮತ್ತು ವೀಣಾ ಎಂ ಭಟ್ ತಮ್ಮ ವಿಭಾಗದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಮಿತಿ ಸಂಚಾಲಕರು ಸಮಿತಿ ಮಟ್ಟದಲ್ಲಿ ಜನ್ಮ ಶತಾಬ್ದಿ ವರ್ಷದಲ್ಲಿ ಮಾಡಬಹುದಾದ ಚಟುವಟಿಕೆಗಳ ವಿವರ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ಸ್ವಾಗತಿಸಿದರು.ಬಂಟ್ವಾಳ ಸಮಿತಿ ಸಂಚಾಲಕ ಗೋಪಾಲಕೃಷ್ಣ ಕಾರಂತ ವಂದಿಸಿದರು. ಭಾರತಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭೆಯಲ್ಲಿ 69 ಮಂದಿ ಪದಾಧಿಕಾರಿಗಳು ಹಾಗೂ ಸಕ್ರಿಯ ಸದಸ್ಯರು ಭಾಗವಹಿದ್ದರು.
Be the first to comment on "ಬಿ.ಸಿ.ರೋಡ್ ನಲ್ಲಿ ದ.ಕ.ಜಿಲ್ಲೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆ"