ಬಂಟ್ವಾಳ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ನಡೆಸಿದ ವಿಶೇಷ, ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಯಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಬಿ.ಸಿ.ರೋಡ್ ಶಾಖೆಗೆ ಶೇ.100 ಫಲಿತಾಂಶ ಬಂದಿದೆ. ಜೂನಿಯರ್ ನೃತ್ಯ ವಿಭಾಗದಲ್ಲಿ 10, ವಿದ್ವತ್ ಪೂರ್ವದಲ್ಲಿ ಒಂದು ವಿದ್ಯಾರ್ಥಿ ಹಾಗು ವಿದ್ವತ್ ಅಂತಿಮದಲ್ಲಿ ಒಂದು ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಕಲಾಕೇಂದ್ರಕ್ಕೆ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಜೂನಿಯರ್ ವಿಭಾಗದ ಕುಮಾರಿ ಹಶಿಕಾ ಜೆ ಶೇಕಡಾ 98 ಅಂಕಗಳನ್ನು ಗಳಿಸಿದ್ದು ಉತ್ತಮ ಸಾಧನೆ ಮಾಡಿರುತ್ತಾಳೆ ಎಂದು ಕಲಾಕೇಂದ್ರದ ನೃತ್ಯ ಗುರು ವಿದುಷಿ ರೋಹಿಣಿ ಉದಯ್ ತಿಳಿಸಿರುತ್ತಾರೆ.
Be the first to comment on "ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಬಿ.ಸಿ.ರೋಡ್ ಶಾಖೆಗೆ ಶೇ.100 ಫಲಿತಾಂಶ"