ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಂ ಕ್ರಷ್ ನ 6 ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಬಬ್ಬುಕಟ್ಟೆ (ಉಳ್ಳಾಲ), ನಾಗರಕಟ್ಟೆ(ಮೂಡಬಿದ್ರೆ), ಬಂಟ್ವಾಳದ ಕೈಕುಂಜೆ, ಪುತ್ತೂರಿನ ನೆಲ್ಲಿಕಟ್ಟೆ, ಬೆಳ್ತಂಗಡಿಯ ಉದಯನಗರ, ವಿಟ್ಲ ವ್ಯಾಪ್ತಿಯ ವಿಟ್ಲ ಮಹಿಳಾ ಮಂಡಲ ಅಂಗನವಾಡಿ ಕಂ ಕ್ರμïಗೆ ಅರ್ಜಿ ಆಹ್ವಾನಿಸಿದ್ದು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆಯರ ಮಾಸಿಕ ಗೌರವಧನ ರೂ.5500 ಹಾಗೂ ಸಹಾಯಕಿಯರ ಮಾಸಿಕ ಗೌರವಧನ ರೂ.3000 ನಿಗಧಿಪಡಿಸಲಾಗಿದೆ.
ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿ.ಯು.ಸಿ ಹಾಗೂ ಸಹಾಯಕಿ ಹುದ್ದೆಗೆ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ. ಅರ್ಜಿ ಸಲ್ಲಿಸಲು ಜನವರಿ 24 ಕೊನೆಯ ದಿನದಿನವಾಗಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಅಂಗನವಾಡಿ ಕ್ರಷ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಜನವರಿ 24 ಕೊನೆಯ ದಿನ"