ಮಾದಕ ಪದಾರ್ಥಗಳು ಇತ್ತೀಚೆಗೆ ಎಲ್ಲೆಂದರಲ್ಲಿ ವ್ಯಾಪಕವಾಗಿದ್ದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ ಇದರ ಬಗ್ಗೆ ಶಾಲೆಗಳ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರು ಗಂಭೀರವಾಗಿ ಚಿಂತಿಸಬೇಕಾಗಿದೆ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಬಂಟ್ವಾಳದ ತೌಹೀದ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಾದರಿಯಾಗಿದೆ ಎಂದು ಬಂಟ್ವಾಳ ನಗರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಕೆ.ವಿ. ಹೇಳಿದರು.
ಬಂಟ್ವಾಳದ ತೌಹೀದ್ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಹಿನ್ನೆಲೆ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಜಿ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳು ಇಡೀ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಶಾಲಾ ವಿದ್ಯಾರ್ಥಿ ಕಬಡ್ಡಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತ ಮೊಹಮ್ಮದ್ ಸಾಹಿಲ್ ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಅಹಮದ್ ಅಫಿಲ್, ಮೊಹಮ್ಮದ್ ರಶ್ವಿನ್ ಮತ್ತು ಅವರಿಗೆ ತರಬೇತು ನೀಡಿದ ಬಶೀರ್ ಕಲ್ಪನೆ ಮತ್ತು ಹನೀನ್ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯರಾದ ಗಾಯತ್ರಿ ಬಿ.ಸಿ, ಮಂಜುಳಾ ಶೆಟ್ಟಿ, ಹಾಗೂ ಜಿಲ್ಲಾ ಸಮನ್ವಯ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಅಸ್ಮಾ ಜಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.ಕರ್ನಾಟಕ ಸರ್ಕಾರದ ಗೇರು ನಿಗಮದ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಶಿಕ್ಷಕರಾದ ಇಬ್ರಾಹಿಂ ಸಲೀಂ, ಶಾಲಾ ಅಧ್ಯಕ್ಷರಾದ ರಿಯಾಜ್ ಹುಸೈನ್, ಸಂಚಾಲಕ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾಸ್ಟರ್, ಇಮ್ರಾನ್, ಸದಸ್ಯರಾದ ಮೂನಿಶ್ ಅಲಿ, ಹಾರೂನ್ ರಶೀದ್, ಉಬೈದುಲ್ಲಾ ಜುಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಅರಬಿ, ಪಿ ಟಿ ಎ ಅಧ್ಯಕ್ಷರಾದ ಮುಸ್ತಫಾ ಹಾಗೂ ಸದಸ್ಯರು ಭಾಗವಹಿಸಿದ್ದರು. ಸಹಾಯಕ ಮುಖ್ಯ ಶಿಕ್ಷಕಿ ರಚನಾ ವಂದಿಸಿದರು. ಶಿಕ್ಷಕಿಯರಾದ ಮಲ್ಲಿಕಾ ಹಾಗೂ ಆಯಿಶಾ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಅಗತ್ಯ: ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ"