ಬಂಟ್ವಾಳ: ಹಿದಾಯ ಫೌಂಡೇಶನ್ ಮಂಗಳೂರು, ಗುಡ್ ವೇ ಫೌಂಡೇಶನ್ ಬಿ.ಸಿ.ರೋಡ್, ಎಸ್.ಆರ್.ಫೌಂಡೇಶನ್ ಬಿ.ಸಿ.ರೋಡ್, ಆಧಾರ್ ಸೇವಾ ಕೇಂದ್ರ ಮಂಗಳೂರು ವತಿಯಿಂದ ಎರಡು ದಿನಗಳ ಆಧಾರ್ ಶಿಬಿರ ಬಿ.ಸಿ.ರೋಡ್ ಎಸ್.ಆರ್.ಫೌಂಡೇಶನ್ ಕಚೇರಿಯಲ್ಲಿ ನಡೆಯಿತು.
ಈ ಶಿಬಿರದಲ್ಲಿ ಹೊಸ ಆಧಾರ್ ಕಾರ್ಡ್, ಹೆಸರು, ಜನ್ಮ ದಿನಾಂಕ, ಲಿಂಗ, ಮೊಬೈಲ್ ನಂಬರ್, ಇಮೇಲ್ ಐಡಿ, ವಿಳಾಸ ತಿದ್ದುಪಡಿ, ಪೊಟೊ ಅಪ್ಡೇಟ್, ಮಕ್ಕಳ 5 ವರ್ಷದ ಮತ್ತು 15 ವರ್ಷದ ಅಪ್ಡೇಟ್, ಪ್ರತಿ 10 ವರ್ಷಕ್ಕೊಮ್ಮೆ ಮಾಡಿಕೊಳ್ಳುವ ಅಪ್ಡೇಟ್ ಗಳನ್ನು ಮಾಡಲಾಯಿತು. ಈ ಸಂದರ್ಭ ಗುಡ್ ವೇ ಫೌಂಡೇಶನ್ ಅಧ್ಯಕ್ಷ ಹಂಝ ಬಸ್ತಿಕೋಡಿ, ಗೌರವಾಧ್ಯಕ್ಷ ಬಿ.ಮೊಹಮ್ಮದ್ ತುಂಬೆ, ಎಸ್.ಆರ್.ಫೌಂಡೇಶನ್ ಅಧ್ಯಕ್ಷ ಲೋಕೇಶ್, ಗುಡ್ ವೇ ಫೌಂಡೇಶನ್ ನ ರಹೀಂ ಮಲ್ಲೂರು, ಆಶಿಕ್ ಕುಕ್ಕಾಜೆ, ಅಫ್ರಾಝ್ ಬೊಳ್ಳಾಯಿ, ಆಧಾರ್ ಸೇವಾ ಕೇಂದ್ರದ ಹೃತಿಕ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಿ.ಸಿ.ರೋಡ್ ನಲ್ಲಿ ಆಧಾರ್ ಶಿಬಿರ"