ಬಂಟ್ವಾಳ: ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಅಭಿವೃದ್ಧಿ ಕಾರ್ಯ ವೇಗ ಪಡೆದಿದ್ದು, ಮೆಲ್ಕಾರ್ ಎಲೆವೇಟೆಡ್ ರಸ್ತೆ (ಅಂಡರ್ ಪಾಸ್ ಮೇಲಿನ ರಸ್ತೆ) ಸಂಚಾರಕ್ಕೆ ತೆರೆದುಕೊಂಡು ವಾಹನ ಓಡಾಟ ಆರಂಭವಾಗಿದೆ. ಕಾಮಗಾರಿ ಇನ್ನೂ ಜಾರಿಯಲ್ಲಿದ್ದು, ಸೇತುವೆಯಲ್ಲಿ ವಾಹನ ಸಾಗುವಾಗ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅಪಘಾತದ ಸಾಧ್ಯತೆಯೂ ಉಂಟು.
ಪಾಣೆಮಂಗಳೂರು ಹಾಗೂ ಮೆಲ್ಕಾರಿನಲ್ಲಿ ಸರ್ವೀಸ್ ರಸ್ತೆಗಳಿದ್ದು, ಎರಡೂ ಕಡೆಯ ಜಂಕ್ಷನ್ ನಲ್ಲಿ ವಾಹನಗಳು ಕ್ರಾಸಿಂಗ್ ಗೆ ಅಂಡರ್ ಪಾಸ್ ನಿರ್ಮಿಸಿ ಮೇಲಿಂದ ಎಲೆವೇಟೆಡ್ ರಸ್ತೆ ನಿರ್ಮಾಣಗೊಂಡಿದೆ. ಇದು ಎರಡು ಕೂಡ ಅಕ್ಕಪಕ್ಕದಲ್ಲೇ ಇದ್ದು, ಸದ್ಯಕ್ಕೆ ಮಧ್ಯದಲ್ಲಿ ರಸ್ತೆಗೆ ಇಳಿಯಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಸರ್ವೀಸ್ ರಸ್ತೆಗೆ ಇಳಿಯುವ ಅವಕಾಶ ಹೀಗೆ ಇರುತ್ತದೆಯೇ ಅಥವಾ ಅದನ್ನು ಮುಚ್ಚುತ್ತಾರೆಯೇ ಎಂಬುದು ಇನ್ನೂ ಗೊತ್ತಾಗಬೇಕಷ್ಟೇ.
Be the first to comment on "ಮೇಲ್ಕಾರ್ ನಲ್ಲಿ ಅಂಡರ್ ಪಾಸ್ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಆರಂಭ"