ಬಂಟ್ವಾಳ: ಮಂಗಳೂರಿನ ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನದ ವತಿಯಿಂದ ಗೀತಾಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ರೋಟರಿ ಭವನದ ಬಳಿ ಇರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಡಿ.15ರ ಭಾನುವಾರ ಸ್ಪರ್ಧೆ ಬೆಳಗ್ಗೆ 9.30ರಿಂದ ನಡೆಯಲಿದೆ. ಸ್ಪರ್ಧೆಗಳ ವಿವರ ಹೀಗಿದೆ. ಭಗವದ್ಗೀತಾ ಪಠಣ:1 ರಿಂದ 4ನೇ ತರಗತಿ ಭಗವದ್ಗೀತೆಯ ಯಾವುದೇ ಎರಡು ಶ್ಲೋಕಗಳು., 5 ರಿಂದ 7ನೇ ತರಗತಿ: ಕರ್ಮ ಯೋಗ(3ನೇ ಅಧ್ಯಾಯ)ದ ಆರಂಭಿಕ 10 ಶ್ಲೋಕಗಳು, 8 ರಿಂದ 10ನೇ ತರಗತಿ: ಕರ್ಮ ಸoನ್ಯಾಸ ಯೋಗ (5ನೇ ಅಧ್ಯಾಯ)ದ ಆರಂಭಿಕ 15 ಶ್ಲೋಕಗಳು., ಪದವಿಪೂರ್ವವಿಭಾಗ: ವಿಶ್ವರೂಪ ದರ್ಶನ ಯೋಗ, ( 11ನೇ ಅಧ್ಯಾಯ)ದ ಆರಂಭಿಕ 18 ಶ್ಲೋಕಗಳು. ಪದವಿ ವಿಭಾಗ: ಗುಣತ್ರಯ ವಿಭಾಗ ಯೋಗ (14ನೇ ಅಧ್ಯಾಯ )ದ ಆರಂಭಿಕ 20 ಶ್ಲೋಕಗಳು, ಸ್ನಾತಕೋತ್ತರ ವಿಭಾಗ: ಮೋಕ್ಷ ಸಂನ್ಯಾಸ ಯೋಗ (18ನೇ ಅಧ್ಯಾಯ) ದ ಆರಂಭಿಕ 20 ಶ್ಲೋಕಗಳು. ಸಾರ್ವಜನಿಕ ವಿಭಾಗ- ದೈವಾಸುರ ಸಂಪದ್ವಿಭಾಗ ಯೋಗ (16ನೇ ಅಧ್ಯಾಯ)ದ ಆರಂಭಿಕ 20 ಶ್ಲೋಕಗಳು. ಭಾಗವಹಿಸುವವರು ಶ್ಲೋಕಗಳನ್ನು ಪುಸ್ತಕ ನೋಡಿಕೊಂಡು ಅಥವಾ ಕಂಠಪಾಠವಾಗಿಯೂ ಹೇಳಬಹುದು
ಕನ್ನಡ ಭಾಷಣ ಸ್ಪರ್ಧೆ: 5 ರಿಂದ 7ನೇ ತರಗತಿ: ಶ್ರೀಕೃಷ್ಣನ ಬಾಲ್ಯ ಲೀಲೆ ವರ್ಣಿಸಿ. 8ರಿಂದ 10ನೇ ತರಗತಿ: ಕಾಳಿಂಗ ಮರ್ದನ ಕೃಷ್ಣ. ಪದವಿ ಪೂರ್ವ ಹಂತ: ಕರ್ಮ ಯೋಗದ ವೈಶಿಷ್ಟ್ಯ. ಪದವಿ ವಿಭಾಗ : ಮನೋಜಯ ಸಾಧಿಸಲು ಭಗವದ್ಗೀತೆ ಆಧಾರ ಸ್ನಾತಕೋತ್ತರ ವಿಭಾಗ: ಭಗವದ್ಗೀತೆ ಜಗತ್ತಿನ ಶಾಂತಿಗೆ ಭಾರತದ ಕೊಡುಗೆ. ಸಾರ್ವಜನಿಕ ವಿಭಾಗ: ಭಗವದ್ಗೀತೆ ಮನುಕುಲಕ್ಕೆ ವರದಾನ. ಭಾಷಣದ ಅವಧಿ ಮೂರು ನಿಮಿಷ.
ಪ್ರಬಂಧ ಸ್ಪರ್ಧೆಗಳು ಹೀಗಿವೆ: 5ರಿಂದ 7ನೇ ತರಗತಿ- ಶ್ರೀ ಕೃಷ್ಣನ ಸುಂದರ ರೂಪ, 8ರಿಂದ 10ನೇ ತರಗತಿ: ಭಗವದ್ಗೀತೆ : 5ನೇ ಅಧ್ಯಾಯದ ಸಾರ. ಪದವಿಪೂರ್ವ ವಿಭಾಗ: ಭಗವದ್ಗೀತೆ : 11ನೇ ಅಧ್ಯಾಯದ ಸಾರ, ಪದವಿ ವಿಭಾಗ: 14ನೇ ಅಧ್ಯಾಯದ ಸಾರ. ಸ್ನಾತಕೋತ್ತರ ವಿಭಾಗ: ಹತೋವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ತಸ್ಮಾ ಮತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯ. ಸಾರ್ವಜನಿಕ ವಿಭಾಗ: 18ನೇ ಅಧ್ಯಾಯದ ಸಾರ ( ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧಿಸುವವರು ಪ್ರಬಂಧಗಳನ್ನು ಮೂರು ಪುಟಗಳಿಗೆ ಮೀರದಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು: ಡಾ ಸುಬ್ರಹ್ಮಣ್ಯ ಭಟ್, ವಿಜಯಶ್ರೀ ಚಿಕಿತ್ಸಾಲಯ, ಅಂಚೆ ಕಚೇರಿ ಎದುರು. ಮೊಗರ್ನಾಡು ನರಿಕೊಂಬು. ಬಂಟ್ವಾಳ ತಾಲೂಕು. 574231
Be the first to comment on "ಗೀತಾಜಯಂತಿ ಪ್ರಯುಕ್ತ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ"