ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ(ರಿ.)
(ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ)
ಆಯೋಜಿಸುವ 2024-25ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಸಾಹಿತ್ಯ ಬಹುಮಾನಕ್ಕೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.
ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ :
ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ.ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ಈ ಬಾರಿ ‘ಲೇಖಕಿಯರಿಂದ ಅನುವಾದಿತ ಕಾದಂಬರಿ’ಗಳನ್ನು ಆಹ್ವಾನಿಸಲಾಗಿದೆ. 2022,2023,2024ರ ಸಾಲಿನಲ್ಲಿ ಪ್ರಕಟವಾದ ಯಾವುದೇ ಭಾಷೆಯಿಂದ ಕನ್ನಡಕ್ಕೆ ಲೇಖಕಿಯರು ಅನುವಾದಿಸಿ ಪ್ರಕಟಿಸಿದ ಕಾದಂಬರಿಯ ಮೂರು ಪ್ರತಿಗಳನ್ನು ಡಿಸೆಂಬರ್ 15ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜೊತೆಗೆ ವೈಯಕ್ತಿಕ ಮಾಹಿತಿ ಮತ್ತು ಸಂಪರ್ಕ ಸಂಖ್ಯೆಯಿರುವ ಪ್ರವೇಶ ಪತ್ರವನ್ನು ಲಗತ್ತಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ 9742538833 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ಚಂದ್ರಭಾಗಿ ರೈ ದತ್ತಿ ಬಹುಮಾನ:
ಕರಾವಳಿಯ ಮೊದಲ ತಲೆಮಾರಿನ ಹಿರಿಯ ಲೇಖಕಿ, ಸಂಘದ ಸದಸ್ಯೆಯೂ ಆಗಿದ್ದ ಚಂದ್ರಭಾಗಿ ರೈ ಅವರ ಹೆಸರಿನಲ್ಲಿ ಕೊಡುವ ಬಹುಮಾನಕ್ಕೆ ಈ ಬಾರಿ ‘ವೈಚಾರಿಕ ಲೇಖನ’ಗಳ ಸಂಕಲನದ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಕನಿಷ್ಠ 30 ಲೇಖನಗಳಿರುವ ಅಪ್ರಕಟಿತ ಸಂಕಲನದ ಡಿಟಿಪಿ ಮಾಡಿದ ಮೂರು ಹಸ್ತಪ್ರತಿಯನ್ನು ಡಿಸೆಂಬರ್ 15ರ ಒಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಕಳುಹಿಸಬೇಕು. ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರಬಹುದು. ಬಹುಮಾನಕ್ಕೆ ಆಯ್ಕೆಯಾದ ಕೃತಿಯನ್ನು ಪ್ರಕಟಿಸುವಾಗ ‘ಚಂದ್ರಭಾಗಿ ರೈ ದತ್ತಿ ಬಹುಮಾನ ಪುರಸ್ಕೃತ’ ಎಂದು ಕಡ್ಡಾಯವಾಗಿ ಮುದ್ರಿಸಬೇಕು. ಸ್ಪರ್ಧಿಯ ಹೆಸರು ವಿಳಾಸ ಮತ್ತು ಸಂಪರ್ಕ ಸಂಖ್ಯೆ ಪ್ರತ್ಯೇಕ ಹಾಳೆಯಲ್ಲಿ ಲಗತ್ತಿಸಿರಬೇಕು.
ಹೆಚ್ಚಿನ ಮಾಹಿತಿಗೆ 94813 92231 ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಪುಸ್ತಕ ಮತ್ತು ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ :
ಶಕುಂತಳಾ ಶೆಟ್ಟಿ ,
ಅಧ್ಯಕ್ಷರು
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ
‘ಸಾಹಿತ್ಯ ಸದನ’
ಅಂಚೆ ಕಚೇರಿ ಬಳಿ, ಉರ್ವ ಸ್ಟೋರ್
ಮಂಗಳೂರು -575006 ಎಂದು ಪ್ರಕಟಣೆ ತಿಳಿಸಿದೆ.
Be the first to comment on "ದತ್ತಿ ಪ್ರಶಸ್ತಿ, ಸಾಹಿತ್ಯ ಬಹುಮಾನ: ಲೇಖಕಿಯರಿಂದ ಕೃತಿಗಳ ಆಹ್ವಾನ"