ರೂಟ್ ಪರ್ಮಿಟ್ ಬಸ್ಸುಗಳು ಮತ್ತು ಶಾಲಾ ಬಸ್ಸುಗಳು ಅನಧಿಕೃತವಾಗಿ ಬಾಡಿಗೆ ಮಾಡುತ್ತಿರುದನ್ನು ನಿಲ್ಲಿಸಿ ಟೂರಿಸ್ಟ್ ವ್ಯಾನ್ ಚಾಲಕ ಮಾಲಕರಿಗೆ ಆಗುವ ತೊಂದರೆಯನ್ನು ತಪ್ಪಿಸುವಂತೆ ಬಂಟ್ವಾಳದ ಟೂರಿಸ್ಟ್ ವ್ಯಾನ್ ಚಾಲಕ- ಮಾಲಕರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಸದಾನಂದ ಹಳೆಗೇಟು ಅವರ ನೇತ್ರತ್ವದಲ್ಲಿ ಬಂಟ್ವಾಳ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಗೆ ಮನವಿ ನೀಡಲಾಯಿತು.
ಬಂಟ್ವಾಳ ತಾಲೂಕಿನಲ್ಲಿ ಸುಮಾರು 80ಕ್ಕೂ ಹೆಚ್ಚು ಮಿನಿ ಬಸ್, ಮ್ಯಾಕ್ಸಿಕ್ಯಾಬ್, ಟೆಂಪೋ ಟ್ರಾವೆಲ್ಸ್, ವಾಹನಗಳು ಇದ್ದು ಮಿನಿ ಬಸ್ ಒಂದಕ್ಕೆ 60.000 ದಿಂದ ಟೆಂಪೋ ಟ್ರಾವೆಲರ್ ಗೆ 23000 ವರೆಗೆ ವಾರ್ಷಿಕ ತೆರಿಗೆಯನ್ನು ಟೂರಿಸ್ಟ್ ಪರ್ಮಿಟ್ ಆಧಾರದಲ್ಲಿ ಸರಕಾರಕ್ಕೆ ಪಾವತಿ ಮಾಡುತ್ತಿದ್ದೇವೆ. ನಮ್ಮ ಈ ಟೂರಿಸ್ಟ್ ವಾಹನಗಳಿಗೆ ವಾರದಲ್ಲಿ ಒಂದು ಎರಡು ಬಾಡಿಗೆ ಆಗುತ್ತಿದ್ದು ತುಂಬಾ ಕಷ್ಟಕರ ಜೀವನವನ್ನು ಸಾಗಿಸುತ್ತೇವೆ.ಇತ್ತೀಚಿನ ದಿನಗಳಲ್ಲಿ ರೂಟ್ ಪರ್ಮಿಟ್ ಬಸ್ಸುಗಳು ಬಿಸಿ ರೋಡ್ ತೊಕ್ಕೊಟ್ಟು ಮಂಗಳೂರು, ಬಿಸಿ ರೋಡು ಕೈಕಂಬ ಕಟೀಲ್, ಬಿಸಿ ರೋಡು ಪಂಜಿಕಲ್ ವಾಮದಪದವು, ಬಿಸಿ ರೋಡು ಮೂಡಬಿದ್ರೆ, ಕುಕ್ಕಾಜೆ, ಮಂಚಿ, ಸಾಲೆತ್ತೂರ್ ಬಾಕ್ರಬೈಲ್ ಹಾಗೂ ಮಂಗಳೂರಿನ ಸಿಟಿ ಬಸ್ಸುಗಳು, ಮದುವೆ ಕಾರ್ಯಕ್ರಮದ ಬಾಡಿಗೆಯನ್ನು ಬಂಟ್ವಾಳದ ಪರಿಸರದಲ್ಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರಿಂದಾಗಿ ನಮ್ಮ ಟೂರಿಸ್ಟ್ ವಾಹನಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಈ ರೂಟ್ ಬಸ್ಸುಗಳಿಗೆ ಸರಕಾರದಿಂದ ರಿಯಾಯಿತಿ ತೆರಿಗೆ ಇರುವುದರಿಂದ ಕಡಿಮೆ ಬಾಡಿಗೆಗೆ ಬರುತ್ತಿವೆ. ನಾವು ಟೂರಿಸ್ಟ್ ತೆರಿಗೆ ಕಟ್ಟಿಯೂ ನಮಗೆ ಬಾಡಿಗೆ ಇಲ್ಲದಂತೆ ಆಗಿದೆ. ಇಂತಹ ಬಸ್ಸುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ಮನವಿಯನ್ನು ಮಾಡುತ್ತಿದ್ದೇವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಕಾರ್ಯದರ್ಶಿ ಸುನಿಕ್ ,ಕೋಶಾಧಿಕಾರಿ ನಮೇಶ್ ಶೆಟ್ಟಿ, ಸದಸ್ಯರುಗಳಾದ ಚಂದ್ರಹಾಸ, ಸುಧಾಕರ ತುಂಬೆ, ಅಬ್ದುಲ್ಲಾ ಅಜಿಲಮೊಗರು, ಮ್ಯಾಕ್ಸಿಮ್ ಸಜೀಪ ಮತ್ತಿತರ ಪ್ರಮುಖರು ಹಾಜರಿದ್ದರು
Be the first to comment on "ಟೂರಿಸ್ಟ್ ವ್ಯಾನ್ ಚಾಲಕ, ಮಾಲೀಕರಿಗೆ ತೊಂದರೆ: ಆರ್.ಟಿ.ಒ.ಗೆ ಮನವಿ"