ಜಗತ್ತಿನ ವಿವಿಧೆಡೆ ಗಣಪತಿ ದೇವರ ಆರಾಧನೆ ನಡೆಯುವ ಮೂಲಕ ಸಾಮರಸ್ಯ ಮತ್ತು ಪ್ರಕೃತಿ ಆರಾಧನೆಯ ಮಹತ್ವ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಇಲ್ಲಿನ ರಾಯಿ ಪೇಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ನಡೆದ ೧೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ವೇಳೆ 13 ಮಂದಿ ಭಕ್ತರಿಗೆ ಹಣ್ಣಿನ ಗಿಡ ವಿತರಿಸಲಾಯಿತು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಮುಖ್ಯಶಿಕ್ಷಕಿ ಸುಜಾತ ರಾಯಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉದ್ಯಮಿ ರಂಜನ್ ಕುಮಾರ್ ಶೆಟ್ಟಿ ಅರಳ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ ಕೊಯಿಲ, ಪ್ರಮುಖರಾದ ಕೆ.ರಮೇಶ ನಾಯಕ ರಾಯಿ, ಟಿ.ಅನಿಲ್ ಕುಮಾರ್ ಪ್ರಭು, ಸುಧೀರ್ ಶೆಟ್ಟಿ ರಾಯಿ, ಪ್ರಕಾಶ್ ಕುಮಾರ್ ಜೈನ್, ರಾಮಸುಂದರ ಗೌಡ, ಸೋಮಪ್ಪ ಮಡಿವಾಳ, ಮೋಹನ ಗೌಡ ಕಲ್ಮಂಜ, ಸೋಮಶೇಖರ ರೈ, ನಾರಾಯಣ ಗೌಡ ಮೀಯಾಲು, ಸತೀಶ್ ಕುಮಾರ್ ಕೊಯಿಲ, ಯಶೋಧರ ರೈ ದೇರಾಜೆ, ಜಯಲಕ್ಷ್ಮಿ ಮಾಬೆಟ್ಟು, ರಾಘವೇಂದ್ರ ಪೂಜಾರಿ ರಾಯಿ, ಕೊರಗಪ್ಪ ಪೂಜಾರಿ, ಮೋಹನ ರಾಯಿ, ರುಕ್ಕಯ ಬಂಗೇರ, ಪರಮೇಶ್ವರ ಪೂಜಾರಿ ಮತ್ತಿತರರು ಇದ್ದರು.
ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಸೀತಾಳ ವಂದಿಸಿದರು. ಸಮಿತಿ ಸಂಚಾಲಕ ಜಗದೀಶ ಕೊಯಿಲ ಮತ್ತು ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಬೈದಗುತ್ತು ಕಾರ್ಯಕ್ರಮ ನಿರೂಪಿಸಿದರು.
Be the first to comment on "ರಾಯಿ: 13ನೇ ವರ್ಷದ ಗಣೇಶೋತ್ಸವ, 13 ಹಣ್ಣಿನ ಗಿಡಗಳ ವಿತರಣೆ"