ಲೊರೆಟ್ಟೊ ಚರ್ಚ್ ಪಾಲನಾ ಮಂಡಳಿಯ ಆರೋಗ್ಯ ಆಯೋಗ ,ಯುವ ಆಯೋಗ ,ಭಾರತೀಯ ಕಥೋಲಿಕ್ ಯುವ ಸಂಚಲನ (ರಿ) ಲೊರೆಟ್ಟೊ ಘಟಕದ ಸಹಭಾಗಿತ್ವದಲ್ಲಿ ಜ್ಯುವೆಲ್ ಗ್ರೂಪ್ ನೇತೃತ್ವದಲ್ಲಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ , ಮಂಗಳೂರು, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ,ದಕ್ಷಿಣ ಕನ್ನಡ ಜಿಲ್ಲೆ ಸಹಯೋಗದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ,ಮಾಹಿತಿ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು.
ಲೊರೆಟ್ಟೊ ಸಿಬಿಎಸ್ ಸಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಫಾದರ್ ಮುಲ್ಲರ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ. ರೋಹನ್ ಗಟ್ಟಿ ಹಾಗೂ ಅಸೋಸಿಯೇಟ್ ಪ್ರೊಫೆಸರ್ ವೈದ್ಯಕೀಯ ಆಂಕೊಲಾಜಿ ಮುಖ್ಯಸ್ಥ ಡಾ ದಿನೇಶ್ ಶೇಟ್ ಮಾಹಿತಿ ಹಾಗೂ ಪರೀಕ್ಷಾ ವಿಧಾನ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಚರ್ಚ್ ಧರ್ಮಗುರು ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತಾ, ಆರೋಗ್ಯಮಯ ಜೀವನ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಗುರಿ ಹೊಂದಿಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ಸಿಪ್ರಿಯಾನ್ ಡಿಸೋಜ, ಕಾರ್ಯದರ್ಶಿ ಶೈಲಾ ಬರ್ಬೋಜ, ಸಂಯೋಜಕರು ಪ್ರಕಾಶ್, ಐಸಿವೈಎಮ್ ಅಧ್ಯಕ್ಷೆ ಸ್ನೇಹಲ್, ಜೀವೆಲ್ ಸಮಾಜ ಸೇವೆಯ ಗ್ರೂಪ್ ನ ಟೀನಾ ಫರ್ನಾಂಡಿಸ್, ಇಂಡಿಯಾನ್ ರೆಡ್ ಕ್ರಾಸ್ ಸಂಸ್ಥೆಯ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಆಲ್ವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರವೀಣ್ ಪಿಂಟೊ ಸ್ವಾಗತಿಸಿದರು. ಡಾ. ರೀಮಾ ಫ್ರೆಂಕ್ ವಂದಿಸಿದರು.
Be the first to comment on "ಲೊರೆಟ್ಟೊದಲ್ಲಿ ಕ್ಯಾನ್ಸರ್ ಉಚಿತ ತಪಾಸಣೆ, ಮಾಹಿತಿ, ರಕ್ತದಾನ ಶಿಬಿರ"