ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸೇವಾ ಸಂಘದ ವತಿಯಿಂದ ಗಾಣದಪಡ್ಪು ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ೧೭೦ನೇ ಜನ್ಮ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು.
ಸಂಘಟನೆ ಮತ್ತು ಪ್ರಚಲಿತ ಸನ್ನಿವೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ದೇಶದಲ್ಲಿ ವಿವಿಧ ಜಾತಿ ಮತ್ತು ಭಾಷೆ ಹಾಗೂ ಧರ್ಮಗಳ ಜನರು ಬಾಲ್ಯಂದಲೇ ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸಬೇಕು. ನಾರಾಯಣಗುರುಗಳು, ಸ್ವಾಮಿ ವಿವೇಕಾನಂದರು ದೇಶದ ಕುರಿತು ಚಿಂತನೆ ನಡೆಸಿದ್ದರು. ದೇಶಕ್ಕಾಗಿ ಎಲ್ಲ ಜಾತಿ ಸಂಘಟನೆಯವರು ಒಟ್ಟಾಗುವ ಅಗತ್ಯವಿದೆ ಎಂದರು.
ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಗುರುಕೃಪಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಶಿಕ್ಷಕಿ ಆರತಿ ದಾಸಪ್ಪ ಪೂಜಾರಿ ಉಪನ್ಯಾಸ ನೀಡಿ, ಮಕ್ಕಳು ಪಠ್ಯದ ಜೊತೆಗೆ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಸಾಧನೆಯ ಮೆಟ್ಟಿಲು ಏರಲು ಸಾಧ್ಯವಿದೆ ಎಂದರು.
ಪುರಸಭಾ ಅಧ್ಯಕ್ಷ ಬಿ. ವಾಸು ಪೂಜಾರಿ ಮತ್ತು ಬೂಡಾ ಅಧ್ಯಕ್ಷ ಬೇಬಿ ಕುಂದರ್ ಸಹಿತ ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಜ್ವಲ್ ಕುಮಾರ್ ಕಾವಳಮುಡೂರು, ಸಿದ್ಧಾರ್ಥ್ ಎಂ.ಸಿ, ರಕ್ಷಾ., ಶರಣ್ಯ ಎನ್.ಟಿ ಅವರನ್ನುಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಶ್ರೀನಿವಾಸ ಪೂಜಾರಿ ಮೇಲ್ಕಾರ್, ರಾಮಚಂದ್ರ ಸುವರ್ಣ, ಗಣೇಶ್ ಪೂಂಜರಕೋಡಿ, ಶಂಕರ ಪೂಜಾರಿ ಕಾಯರ್ ಮಾರ್, ಪ್ರಶಾಂತ್ ಕೋಟ್ಯಾನ್ ಸನ್ಮಾನಿತರ ವಿವರ ನೀಡಿದರು. ಪ್ರೇಮನಾಥ ಬಂಟ್ವಾಳ, ನಾಗೇಶ್ ಪೂಜಾರಿ ನೈದೇಲು ವಿದ್ಯಾರ್ಥಿಗಳ ಪರಿಚಯಿಸಿದರು.
ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ ಮಿತ್ತಬೈಲು, ಲೆಕ್ಕಪರಿಶೋಧಕ ಹೇಮಂತ್ ಕುಮಾರ್ ಮೂರ್ಜೆ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್, ಯುವವಾಹಿನಿ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಎಂ. ತುಂಬೆ ಸ್ವಾಗತಿಸಿ, ಕೋಶಾಧಿಕಾರಿ ಆನಂದ ಸಾಲ್ಯಾನ್ ಶಂಭೂರು ವಂದಿಸಿದರು. ಯತೀಶ್ ಪೂಜಾರಿ ಶಂಭೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Be the first to comment on "ಬಂಟ್ವಾಳದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನಾಚರಣೆ, ಸಾಧಕರಿಗೆ ಸನ್ಮಾನ"