ಬಂಟ್ವಾಳ: ಬಂಟ್ವಾಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ), ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಘಟಕ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ (ರಿ) ಮಂಗಳೂರು ಸಹಯೋಗದೊಂದಿಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರಿಗೆ ಕೆಸರ್ ಡೊಂಜಿ ದಿನ 2024 ಕಾರ್ಯಕ್ರಮ ಭಾನುವಾರ ಬಂಟ್ವಾಳ ಸ್ಪರ್ಶ ಕಲಾ ಮಂದಿರ ಬಳಿ ಇರುವ ಕೆಸರುಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ, ನಮ್ಮ ಹಿಂದಿನ ಸಂಸ್ಕಾರವನ್ನು ಉಳಿಸುವುದರೊಂದಿಗೆ ಸಶಕ್ತ,ಸದೃಢ,ತುಳು ಸಂಸ್ಕೃತಿ ಉಳಿಸುವ ಕಾರ್ಯ ಸಮಾಜದ ಯುವ ಪೀಳಿಗೆಯಿಂದಾಗಬೇಕು ಎಂದರು. ಬಳಿಕ ಕೆಸರು ಗದ್ದೆಯಲ್ಲಿ ಕಂಬಳದ ಕೋಣವನ್ನು ಇಳಿಸುವ ಮೂಲಕ ವಿವಿಧ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಸಭಾಧ್ಯಕ್ಷತೆಯನ್ನು ದ. ಕ. ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಬಿ. ಎನ್. ಪ್ರಕಾಶ್ ವಹಿಸಿದ್ದರು. ಸಂಘದ ತಾಲೂಕು ಗೌರವಾಧ್ಯಕ್ಷ ಹಾಗೂ ನಿಕಟಪೂರ್ವ ಅಧ್ಯಕ್ಷ ಎನ್.ಕೆ.ಶಿವ ನಂದಾವರ, ಉದ್ಯಮಿಗಳಾದ ಉದಯ ಸಾಲಿಯಾನ್ ಅಜ್ಜಾಡಿ ನಲ್ಲೂರು, ಧರ್ಮೇಂದ್ರ ಗಣೇಶಪುರ, ಸುಧಾಕರ ಪುತ್ರನ್, ಪ್ರವೀಣ್ ಎನ್. ಬಂಗೇರ, ಡಾ. ಸರಳಾ ರಮೇಶ್, ಲಗೂನ್ ಕ್ಲೋತಿಂಗ್ ಪ್ರೈ ಲಿ. ಹಿರಿಯ ಪ್ರಬಂಧಕ ರಮೇಶ್ ಬಂಗೇರ, ಸಕಲೇಶಪುರದ ಪಿಡಬ್ಲ್ಯುಡಿ ಗುತ್ತಿಗೆದಾರ ಕೆ.ವಿಶ್ವನಾಥ ಹಾಗೂ ಪುತ್ತೂರು ನಗರಸಭೆ ಸದಸ್ಯ ಪ್ರೇಮ್ ಕುಮಾರ್ ಭಾಗವಹಿಸಿದ್ದರು. ಈ ಸಂದರ್ಭ ಭಾರತೀಯ ಭೂಸೇನೆಯ ಸುಬೇದಾರ್ ಜಯೂನಿಯರ್ ಕಮೀಷನರ್ ಆಫೀಸರ್ ಆಗಿರುವ ಉಮೇಶ್ ಸಾಲಿಯಾನ್ ಹಿರಿಯಡ್ಕ, ಕಾಂತಾರ ಖ್ಯಾತಿಯ ಚಿತ್ರನಟ ಶನಿಲ್ ಗುರು, ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಆಟಗಾರ ಸಂಕೇತ್ ಸುರೇಶ್ ಹೊಸಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಗೌರವ ಸಲಹೆಗಾರ ಪುಷ್ಪರಾಜ್ ಕುಕ್ಕಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯೋಗೀಶ್ ಕಲಸಡ್ಕ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಹರೀಶ್ ಮಂಕುಡೆ ವಂದಿಸಿದರು. ವೆಂಕಟೇಶ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಮೂರು ಜಿಲ್ಲೆಗಳ ಮಡಿವಾಳ ಸಮಾಜ ಬಾಂಧವರಿಗೆ ‘ಕೆಸರ್ಡೊಂಜಿ ದಿನ’"