ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಬಂಟ್ವಾಳ ಡಿವಿಜನ್ ವತಿಯಿಂದ ಮಾದಕ ವಸ್ತು ಜನಜಾಗೃತಿ ಅಭಿಯಾನ ಮಂಚಿ ಕುಕ್ಕಾಜೆಯಲ್ಲಿ ನಡೆಯಿತು.
ಎಸ್.ಎಸ್.ಎಫ್. ಕರ್ನಾಟಕ ರಾಜ್ಯ ಸಮಿತಿಯು ಆಗಸ್ಟ್ 24,25 ರಂದು ಮೈಸೂರಲ್ಲಿ ನಡೆಸಲ್ಪಡುವ ಕ್ಯಾಂಪಸ್ ಕಾನ್ಫರೆನ್ಸ್ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಕ್ಯಾಂಪಸ್ ವಾಕಥಾನ್ ಕಾರ್ಯಕ್ರಮ ಕಾಲ್ನಡಿಗೆ ಜಾಥಾ, ಭಿತ್ತಿ ಪತ್ರ ಪ್ರದರ್ಶನ ಹಾಗೂ ಬೀದಿ ಭಾಷಣದೊಂದಿಗೆ ನಡೆಯಿತು.
ಡಿವಿಷನ್ ಅಧ್ಯಕ್ಷರಾದ ತ್ವಯ್ಯಿಬ್ ಅಝ್ಹರಿ ಅಧ್ಯಕ್ಷತೆ ವಹಿಸಿದರು. ಕ್ಯಾಂಪಸ್ ವಿದ್ಯಾರ್ಥಿ ಮಸೂದ್ ಶಾಯಿಕ್ ಹಾಗೂ ವೆಸ್ಟ್ ಜಿಲ್ಲಾ ಪಬ್ಲಿಕೇಶನ್ ಕಾರ್ಯದರ್ಶಿ ಸಿನಾನ್ ಸಖಾಫಿ ಅಜಿಲಮೊಗರು, ಪೋಲಿಸ್ ಕಾನ್ಸ್ಟೇಬಲ್ ಪ್ರವೀಣ್, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಹಾಗೂ ರಾಜ್ಯ ಮೀಡಿಯಾ ಕಾರ್ಯದರ್ಶಿ ಇರ್ಶಾದ್ ಹಾಜಿ ಗೂಡಿನಬಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಎಂ.ಇಬ್ರಾಹಿಂ ಉಪಸ್ಥಿತರಿದ್ದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ ಸ್ವಾಗತಿಸಿದರು. ಕ್ಯಾಂಪಸ್ ಕಾರ್ಯದರ್ಶಿ ತಮೀಮ್ ಕಟ್ಟತ್ತಿಲ ವಂದಿಸಿದರು.
Be the first to comment on "ಎಸ್.ಎಸ್.ಎಫ್. ಬಂಟ್ವಾಳ ಡಿವಿಜನ್ ವತಿಯಿಂದ ಮಾದಕವಸ್ತು ಜಾಗೃತಿ ಅಭಿಯಾನ"