ಯುವವಾಹಿನಿ ರಿ ಬಂಟ್ವಾಳ ಘಟಕ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ ಗುರುತತ್ವವಾಹಿನಿ ಮಾಲಿಕೆ-1 ಕಾರ್ಯಕ್ರಮ ಆರಂಭಗೊಂಡಿದೆ.
ನಾರಾಯಣ ಗುರುಗಳ ಸಂದೇಶದ ಜೊತೆ ಯುವವಾಹಿನಿ ಸದಸ್ಯರ ಬಾಂದವ್ಯದ ಬೆಸುಗೆ ಇದರಿಂದ ಬಲಿಷ್ಟವಾಗುತ್ತದೆ ಸಮಾಜದ ಸ್ವಾಸ್ತ್ಯ ಮತ್ತು ಸಂಘಟನೆಗೆ ಈ ರೀತಿಯ ಕಾರ್ಯಕ್ರಮದ ಅಗತ್ಯ ಇದೆ ಎಂದು ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ಕಾರ್ಯಕ್ರಮಕ್ಕೆ ನರಿಕೊಂಬು ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು.
ನರಿಕೊಂಬು ಗ್ರಾಮದ ಏಲಬೆ ನಾಗೇಶ್ ಪೂಜಾರಿ ಯವರ ಮನೆಯಲ್ಲಿ ನಾರಾಯಣಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಅಂಗವಾಗಿ ಮಾಲಿಕೆ-1 ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿದರು.
ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಾರಾಯಣಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ, ಮಾಜಿ ಅಧ್ಯಕ್ಷರಾದ ಪ್ರೇಮನಾಥ ಕೆ. ಶಿವಾನಂದ, ರಾಜೇಶ್ ಸುವರ್ಣ, ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ಸಾಂಸ್ಕೃತಿಕ ನಿರ್ದೇಶಕರು ಧನುಷ್ ಮದ್ವ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡು, ಮಹಿಳಾ ನಿರ್ದೇಶಕಿ ಹರಿಣಾಕ್ಷಿ, ಆರೋಗ್ಯ ನಿರ್ದೇಶಕರು ಮಹೇಶ್, ಸದಸ್ಯ ಪ್ರಶಾಂತ್ ಏರಮಲೆ ಮತ್ತಿತರು ಉಪಸ್ಥಿತರಿದ್ದರು.
Be the first to comment on "ಯುವವಾಹಿನಿ ಬಂಟ್ವಾಳ ಘಟಕದಿಂದ ಗುರುತತ್ವವಾಹಿನಿ ಮಾಲಿಕೆ ಆರಂಭ"