ಮಳೆಯಿಂದ ಭೂಕುಸಿತಕ್ಕೊಳಗಾದ ಹೊಸ್ಮಾರು ಪ್ರದೇಶ ಹಾಗೂ ಆವರಣಗೋಡೆ ಕುಸಿದ ದೈವಗುಡ್ಡೆ ಪ್ರದೇಶಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುರುವಾರ ಭೇಟಿ ನೀಡಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಹೊಸ್ಮಾರಿನಲ್ಲಿ ಮನೆಯ ಅಂಗಳ ಮುಂಭಾಗದ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ನಡೆದಿತ್ತು, ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರ್ಧ ಭಾಗದ ತಡೆಗೋಡೆ ಕುಸಿದಿದ್ದು, ಉಳಿದ ಅರ್ಧ ಭಾಗದ ತಡೆಗೋಡೆ ಕುಸಿದು ಬೀಳವ ಹಂತದಲ್ಲಿದೆ. ಘಟನೆಯಿಂದ ಮನೆಯ ಅಂಗಳ ಬಹುತೇಕ ಕುಸಿದಿದ್ದು, ಮನೆ ಅಪಾಯಕ್ಕೆ ಸಿಲುಕಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ದೈವಗುಡ್ಡೆ ಎಂಬಲ್ಲಿ ಅವರಣಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗುವ ಸಂಭವವಿರುವ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಅವಲೋಕನವನ್ನು ಶಾಸಕ ರಾಜೇಶ್ ನಾಯ್ಕ್ ನಡೆಸಿದರು.
ಪ್ರಾಥಮಿಕ ಹಂತದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು, ಮತ್ತು ಸಮಸ್ಯೆಯಿಂದ ಸಿಲುಕಿಕೊಂಡ ಮನೆಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕಾರ್ಯಕೈಗೊಂಡು ಸರಕಾರದಿಂದ ಸಿಗುವ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಪ್ರಮುಖರಾದ ದೇವದಾಸ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರರು ಹಾಜರಿದ್ದರು
Be the first to comment on "ಮಳೆಹಾನಿ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಭೇಟಿ, ಪರಿಶೀಲನೆ"