ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ, ಶಾಲಾ ಮಂತ್ರಿಮಂಡಲವನ್ನು ಉದ್ಘಾಟಿಸಲಾಯಿತು. 10 ನೇ ತರಗತಿಯ ಜಾನಿಸ್ ಫೆರ್ನಾಂಡಿಸ್ ಶಾಲಾ ನಾಯಕಿಯಾಗಿ, 9 ನೇ ತರಗತಿಯ ಹಲೀಮಾ ರೀಹ ಶಾಲಾ ಉಪನಾಯಕಿಯಾಗಿ, ಅಂತೆಯೆ ಮಂತ್ರಿ ಸ್ಥಾನಕ್ಕಾಗಿ ಆರಿಸಲ್ಪಟ್ಟ ಅಭ್ಯರ್ಥಿಗಳು, 4 ದಳಗಳ ನಾಯಕರು ಪ್ರಮಾಣ ವಚನ ದೊಂದಿಗೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಸ್ವೀಕರಿಸಿದರು.
ಶಾಲಾ ಸಂಚಾಲಕರಾದ ಅತೀ ವಂದನೀಯ ಸ್ವಾಮಿ ವಲೇರಿಯನ್ ಡಿ’ಸೋಜಾರವರು ಮಕ್ಕಳನ್ನು ಉದ್ದೇಶಿಸಿ, ಮಂತ್ರಿ ಮಂಡಲದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ಮಂತ್ರಿ ಸ್ಥಾನದಲ್ಲಿರುವಾಗ ಅವರು ಮಾಡಬೇಕಾದ ಕಾರ್ಯಾಗಳು, ಜವಾಬ್ದಾರಿ ವಹಿಸಿಕೊಂಡ ನಾಯಕರು ಉಳಿದ ವಿದ್ಯಾರ್ಥಿಗಳಿಗೆ ಸದಾ ಮಾದರಿಯಾಗಿ ರೇಕು ಮುಂತಾದ ವಿಚಾರಗಳನ್ನು ತಿಳಿಯಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯರು ಮಾತಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು, ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ಕರೆಕೊಟ್ಟರು. ಫಾತಿಮಾ ನೌಶಿಯ ಕಾರ್ಯಕ್ರಮ ನಿರೂಪಿಸಿದರು, ಹರ್ಷ ಸ್ವಾಗತಿಸಿದರು, ಆಶ್ನಾ ರೊಡ್ರಿಗಸ್ ವಂದಿಸಿದರು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
Be the first to comment on "ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನೆ"