ಕಾಂಗ್ರೆಸ್ ಸರಕಾರದ ನೀತಿಗಳಿಂದ ಜನರಿಗೆ ತೊಂದರೆ ಆಗಿದ್ದು, ಅಧಿಕಾರದ ಬಹುಮತ ಇದೆ ಎಂದು ಜನವಿರೋಧಿಯಾಗಿ ತನಗೆ ಬೇಕಾದಂತೆ ವರ್ತಿಸುತ್ತಿದೆ, ಈ ಬಾರಿ ಪದವೀಧರರು ಮತ್ತು ಶಿಕ್ಷಕ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದ್ದಾರೆ.ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ವಿಚಾರದಲ್ಲಿ ಸರಕಾರ ಹಾಗೂ ಮಂತ್ರಿಗಳು ವರ್ತಿಸುತ್ತಿರುವ ರೀತಿಯಲ್ಲೇ ಇದು ಗೊತ್ತಾಗುತ್ತದೆ, ಅವ್ಯವಹಾರದಲ್ಲಿ ಯಾರ್ಯಾರಿದ್ದಾರೆ ಎಂಬುದು ನಿಷ್ಪಕ್ಷಪಾತ ತನಿಖೆಯಿಂದ ಗೊತ್ತಾಗಬೇಕು, ಹೀಗಾಗಿ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಸರಕಾರದ ಕುರಿತ ಜನಾಭಿಪ್ರಾಯವನ್ನು ಈ ಚುನಾವಣೆ ರೂಪಿಸುತ್ತದೆ, ಇದರಲ್ಲಿ ನಾವು ಗೆದ್ದು ಬರಲಿದ್ದೇವೆ. ಬಿಜೆಪಿ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಕುರಿತು ಇರುವ ಟೀಕೆಗಳು ಆಧಾರರಹಿತವಾಗಿದ್ದು, ಅದಕ್ಕೆ ಸೂಕ್ತ ಉತ್ತರವನ್ನು ಕೊಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪಕ್ಷ ಪ್ರಮುಖರಾದ ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ ಉಪಸ್ಥಿತರಿದ್ದರು.
Be the first to comment on "ಬಹುಮತ ಇದೆ ಎಂದು ಬೇಕಾಬಿಟ್ಟಿ ವರ್ತಿಸುತ್ತಿರುವ ಕಾಂಗ್ರೆಸ್ – ಬಂಟ್ವಾಳದಲ್ಲಿ ಪ್ರತಾಪ್ ಸಿಂಹ ನಾಯಕ್ ಟೀಕೆ"