ಬಂಟ್ವಾಳನ್ಯೂಸ್ ನಲ್ಲಿ ಮೇ 11ರಂದು ಪ್ರಕಟವಾದ ವರದಿಗೆ ಸ್ಪಂದನೆ ದೊರಕಿದೆ. ಗೋಳ್ತಮಜಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಅಪಾಯಕಾರಿಯಾದ ಎರಡು ಕೊಠಡಿಗಳು ಶಾಲಾರಂಭ ಸಮಯ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನದ ಮೂಲಕ ತೆರವು ಮಾಡಿದೆ.
ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಲ್ಲಡ್ಕ ವಲಯದ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನದ ಮೂಲಕ ತೆರವು ಮಾಡಿದೆ. ತಾಲೂಕು ಯೋಜನೆ ಅಧಿಕಾರಿ ರಮೇಶ್, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ತಂಡದ ಸಂಯೋಜಕ ವಿದ್ಯಾ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಮಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವೆಂಕಪ್ಪ, ಓಂ ಶ್ರೀ ಸಾಯಿ ಗಣೇಶ್ ಸೇವಾ ಟ್ರಸ್ಟ್ ನ ರಾಮಚಂದ್ರ, ಚಿದಾನಂದ ಚೇತನ್, ಮೊದಲಾದವರ ಉಪಸ್ಥಿತರಿದ್ದರು. ಕಾರ್ಯಕ್ರಮದ ಜೊತೆಗೆ ಕೈಜೋಡಿಸಿದ ಓಂ ಶ್ರೀ ಸಾಯಿ ಗಣೇಶ್ ಸೇವಾ ಟ್ರಸ್ಟ್ ಗೊಳ್ತಮಜಲು ಸಹಕರಿಸಿದ್ದರು.
Be the first to comment on "ಶೌರ್ಯ ವಿಪತ್ತು ತಂಡದಿಂದ ಗೋಳ್ತಮಜಲು ಶಾಲೆ ಅಪಾಯಕಾರಿ ಕೊಠಡಿ ತೆರವು"