ನರೇಂದ್ರ ಮೋದಿಯವರ ವಿಕಸಿತ ಭಾರತದ ಸಂಕಲ್ಪದ ಜೊತೆ ದ.ಕ.ಜಿಲ್ಲೆಯನ್ನು ವಿಕಸಿತ ಜಿಲ್ಲೆಯಾಗಿ ಬದಲಾವಣೆಯನ್ನು ಮಾಡುವ ಕನಸು ಕಂಡಿದ್ದು, ಜಿಲ್ಲೆಯ ಜನತೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಂಟ್ವಾಳದ ಸ್ಪರ್ಶಾ ಕಲಾ ಮಂದಿರದಲ್ಲಿ ಸೋಮವಾರ ನಡೆದ ಪ್ರಬುದ್ಧರ ಸಂವಾದದಲ್ಲಿ ಮಾತನಾಡಿದರು.
ಜಿಲ್ಲೆಯ ಜನತೆಗೆ ಅಗತ್ಯವಿರುವ ಮೂಲಸಂಪರ್ಕ, ಕೈಗಾರಿಕೆ, ಬಂದರು, ಸಾಂಸ್ಕೃತಿಕ, ಪ್ರವಾಸೋದ್ಯಮ, ಕೃಷಿ, ನಾರಿ ಶಕ್ತಿ, ಕರಾವಳಿ ಭದ್ರತೆ ಸಹಿತ ಅಭಿವೃದ್ಧಿಗೆ ಬೇಕಾದ ಆದ್ಯತಾ ಕ್ಷೇತ್ರಗಳನ್ನು ತಾನು ಪಟ್ಟಿ ಮಾಡಿದ್ದು, ಅದರಂತೆ ಕಾರ್ಯನಿರ್ವಹಿಸಲು ಬದ್ಧನಿದ್ದೇನೆ ಎಂದವರು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಮಹತ್ತರವಾದ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣವಾಗಿದ್ದಾರೆ ಎಂದರು,
ಪ್ರಮುಖರಾದ ಪೂಜಾ ಪೈ, ಜಗದೀಶ ಶೇಣವ, ದೇವಪ್ಪ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ವಿಕಸಿತ ಭಾರತ, ದಕ್ಷಿಣ ಕನ್ನಡ ನಿರ್ಮಾಣಕ್ಕೆ ಪ್ರಬುದ್ಧ ಮತದಾರರ ಪಾತ್ರ ಹಿರಿದು: ಬಂಟ್ವಾಳದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ"