ಮೊಡಂಕಾಪುವಿನಲ್ಲಿರುವ ರೈಲ್ವೆ ಮೇಲ್ಸೇತುವೆಯ ಬಳಿ ಮಂಗಳವಾರ ಬೆಳಗ್ಗೆ ನಡೆದ ಘಟನೆಯೊಂದರಲ್ಲಿ ರೋಲರ್ ಅನ್ನು ತೆಗೆದುಕೊಂಡು ಹೋಗುತ್ತಿದ್ದ ಲಾರಿಯೊಂದು ಸಿಲುಕಿಕೊಂಡಿದೆ. ಬಳಿಕ ಅದನ್ನು ತೆರವುಗೊಳಿಸುವ ಹೊತ್ತಿಗೆ ಹಲವು ಹೊತ್ತು ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಬೆಂಜನಪದವು ಸೈಟ್ ನಿಂದ ಪುತ್ತೂರು ಸವಣೂರು ಎಂಬಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ಅನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗುವ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೆ ಅಡಿಭಾಗದಲ್ಲಿ ಕ್ರಾಸ್ ಮಾಡಲು ಸಾಧ್ಯವಾಗದೆ ಸಿಲುಕಿಕೊಂಡಿತ್ತು.. ರೈಲ್ವೆಯ ಓವರ್ ಬ್ರಿಡ್ಜ್ ನ ಎತ್ತರಕ್ಕಿಂತ ಅಧಿಕ ಎತ್ತರದಲ್ಲಿ ಲಾರಿಯ ಲೋಡ್ ಮಾಡಿಕೊಂಡಿದ್ದೇ ಈ ಘಟನೆಗೆ ಕಾರಣ. ಘಟನೆಯಿಂದ ರೈಲ್ವೆ ಇಲಾಖೆ ಗೆ ಸೇರಿದ ಕಬ್ಬಿಣದ ರಾಡ್ ತುಂಡಾಗಿ ಲಾರಿಯ ಮೇಲೆ ಬಿದ್ದಿದೆ ಅದೃಷವಶಾತ್ ಬೇರೆ ಯಾವುದೇ ವಾಹನಗಳ ಮೇಲೆ ಬೀಳದ ಕಾರಣ ದೊಡ್ಡ ಅನಾಹುತ ತಪ್ಪಿಹೋಯಿತು.
Be the first to comment on "ಮೊಡಂಕಾಪು ರೈಲ್ವೆ ಮೇಲ್ಸೇತುವೆ ಬಳಿ ಸಿಲುಕಿಕೊಂಡ ಲಾರಿ, ಸಂಚಾರಕ್ಕೆ ಅಡ್ಡಿ"