ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಲ್ಲಿ ಇಡೀ ಜಿಲ್ಲೆಯ ಪದಾಧಿಕಾರಿಗಳ ಹೊಸ ತಂಡವನ್ನೇ ಕಟ್ಟಿಕೊಂಡಿದ್ದು, ಅದರಲ್ಲಿ ಬಂಟ್ವಾಳದ ಅನುಭವಿಗಳೂ ಇದ್ದಾರೆ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷರಾಗಿ ನಂದನ್ ಮಲ್ಯ, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಜಗನ್ನಾಥ ಬೆಳ್ವಾಯಿ, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಹರೀಶ್ ಬಿಜತ್ರೆ, ರೈತ ಮೋರ್ಚಾ ಅಧ್ಯಕ್ಷರಾಗಿ ಗಣೇಶ ಗೌಡ ನಾವುರ ನೇಮಕಗೊಂಡಿದ್ದಾರೆ.
ಕ್ಷೇತ್ರ ಸಮಿತಿಯಲ್ಲಿ ಬೆಳ್ತಂಗಡಿ ಶ್ರೀನಿವಾಸ ರಾವ್, ಮೂಡುಬಿದಿರೆ ದಿನೇಶ್ ಪುತ್ರನ್, ಮಂಗಳೂರು ನಗರ ಉತ್ತರ ರಾಜೇಶ್ ಕೊಟ್ಟಾರಿ, ದಕ್ಷಿಣ ರಮೇಶ್ ಕಂಡೆಟ್ಟು, ಮಂಗಳೂರು ಜಗದೀಶ ಆಳ್ವ ಕುವೆತ್ತಬೈಲ್, ಬಂಟ್ವಾಳ ಚೆನ್ನಪ್ಪ ಕೋಟ್ಯಾನ್, ಸುಳ್ಯ ವೆಂಕಟ ವಳಲಂಬೆ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಪೂಜಾ ಪೈ, ರಾಕೇಶ್ ರೈ ಕೆಡಿಂಜೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ತಿಲಕ್ ರಾಜ್ ಕೃಷ್ಣಾಪುರ, ಜಯಂತ ಪೂಜಾರಿ ಬೆಳ್ತಂಗಡಿ, ಸುನಿಲ್ ಆಳ್ವ ಮೂಲ್ಕಿ, ಶಾಂತಿಪ್ರಸಾದ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾಗಿ ಯತೀಶ್ ಆರ್ವಾರ್ ಸುಳ್ಯ, ಕಿಶೋರ್ ಬೊಟ್ಯಾಡಿ ಪುತ್ತೂರು, ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿಗಳಾಗಿ ವಿನಯ ಮುಳುಗಾಡು, ದೇವಪ್ಪ ಪೂಜಾರಿ, ಕವಿತಾ ದಿನೇಶ್, ಪೂರ್ಣಿಮಾ, ವಸಂತಿ ಕುಲಾಲ್, ವಿದ್ಯಾ ಗೌರಿ, ದಿನೇಶ್ ಅಮ್ಟೂರು, ಸೀತಾರಾಮ ಬೆಳಾಲು, ಕೋಶಾಧಿಕಾರಿಯಾಗಿ ಸಂಜಯ ಪ್ರಭು, ಕಾರ್ಯಾಲಯ ಕಾರ್ಯದರ್ಶಿಯಾಗಿ ಅರವಿಂದ ಬೆಂಗ್ರೆ ನೇಮಕಗೊಂಡಿದ್ದಾರೆ.
ಮಾಧ್ಯಮ ಪ್ರಮುಖ್ ಆಗಿ ವಸಂತ್ ಜೆ ಪೂಜಾರಿ, ಮನೋಹರ ಶೆಟ್ಟಿ, ಜಿಲ್ಲಾ ವಕ್ತಾರರಾಗಿ ರಾಜಗೋಪಾಲ ರೈ, ಮೋಹನರಾಜ್ ಕೆ.ಆರ್, ಅರುಣ್ ಶೇಟ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ವಿರೇಶ್, ಸಹಸಂಚಾಲಕರಾಗಿ ಅಕ್ಷಯ್ ಆಳ್ವ, ಕಾರ್ತಿಕ್ ರಾವ್ ಗಂಜಿಮಠ ನೇಮಕಗೊಂಡಿದ್ದಾರೆ.
‘’’’
Be the first to comment on "ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಹೊಸ ತಂಡ: ಬಂಟ್ವಾಳದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು ಜಿಲ್ಲಾ ಕಾರ್ಯದರ್ಶಿಗಳು"