ಮಂಗಳೂರು ಪುತ್ತೂರು ಪ್ಯಾಸೆಂಜರ್ ರೈಲು ಸಕಾಲಕ್ಕೆ ಓಡದಿದ್ದರೆ ಇದ್ದೂ ಏನು ಪ್ರಯೋಜನ? ಈ ಕುರಿತು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿ ಹಾಗೂ ರೈಲ್ವೆ ಬಳಕೆದಾರ ಶ್ರೀಕರ ಬಿ. ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡುವ ಸಂದರ್ಭದಲ್ಲಿ ಅದರ ಸುಗಮ ಸಂಚಾರಕ್ಕೆ ಉಳಿದ ರೈಲುಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಸಂಗತಿ ಗಮನಕ್ಕೆ ಬರುತ್ತಿದೆ. ಕೆಲವು ದಿನಗಳಿಂದು ನೈರುತ್ಯ ರೈಲ್ವೆ ವಲಯದ ಪ್ರದೇಶಲ್ಲಿಯೇ ತಡವಾಗಿ ಬರುವ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ತಲುಪುವ ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗಾಗಿ ತಡೆ ಹಿಡಿಯಲಾಗುತ್ತದೆ.
ಇದರ ಮಧ್ಯೆ ಮುಂಬೈನಿಂದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ತಡವಾಗಿ ಬಂದರೆ ಈ ಎರಡು ರೈಲುಗಳು ಒಂದರ ನಂತರ ಒಂದಾಗಿ ಮಂಗಳೂರು ಸೆಂಟ್ರಲ್ ತಲುಪುತ್ತದೆ. ಇದೇ ಸಮಯಕ್ಕೆ ಪುತ್ತೂರಿನಿಂದ ಸರಿಯಾದ ಸಮಯಕ್ಕೆ ಯಾವಾಗಲು ನಿತ್ಯ ಪ್ರಯಾಣಿಕರೇ ಸಂಚರಿಸುವ ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಬರುತ್ತದೆ. ಇದು ಕೆಲವು ದಿನಗಳಂದು ಮಂಗಳೂರು ಜಂಕ್ಷನಿಗೆ 5 ನಿಮಿಷ ಮೊದಲೇ ಬರುತ್ತದೆ.
ಇದು ಎಷ್ಟೇ ಬೇಗ ಬಂದರೂ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್ ತಲುಪದೆ,ಮುರುಡೇಶ್ವರ ರೈಲು ಮಂಗಳೂರು ಜಂಕ್ಷನ್ ಹಾದುಹೋಗದೆ ಮಂಗಳೂರು ಜಂಕ್ಷನಲ್ಲಿಯೇ ತಡೆಹಿಡಿಯಲಾಗುತ್ತಿದೆ. ಇದರಿಂದ ಪ್ರತಿದಿನ ಪುತ್ತೂರು ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್ ತಲುಪುವಾಗ 9:45ರ ಹತ್ತಿರ ಆಗುತ್ತಿದೆ. ಇದು ಈ ರೈಲಿನಲ್ಲಿ ಸಂಚರಿಸುವ ವಿದ್ಯಾರ್ಥಿಗಳು,ಉದ್ಯೋಗಿಗಳು ಹಾಗು ಇತರೇ ಪ್ರಯಾಣಿಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಈ ಸಮಸ್ಯೆ ವಂದೇ ಭಾರತ್ ರೈಲಿನಿಂದಾಗಿ ಆಗುತ್ತಿರುವುದೋ,ಮತ್ಸ್ಯಗಂಧ ಎಕ್ಸ್‌ಪ್ರೆಸ್,ಮುರುಡೇಶ್ವರ ರೈಲು ತಡವಾಗಿ ಪ್ರಯಾಣಿಸುತ್ತಿರುವುದರಿಂದ ಆಗುತ್ತಿರುವುದೋ ಗೊತ್ತಿಲ್ಲ.ರೈಲ್ ಮದದ್ ಅಲ್ಲಿ ಎಷ್ಟೇ ದೂರು ಕೊಟ್ಟರು ಪ್ರಯೋಜನ ಇಲ್ಲ.
ಬೇಜವಾಬ್ದಾರಿತನದ ಉತ್ತರವು ದೂರೂ ಕೊಟ್ಟ ಕೂಡಲೇ ಬರುತ್ತದೆ. ಇಂದು ಕೂಡ ಸಂಜೆ ಪುತ್ತೂರಿಗೆ ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವಾಗ ಬೆಳಿಗ್ಗೆ ರೈಲು ಯಾವಾಗಲೂ ತಡವಾಗಿ ಮಂಗಳೂರಿಗೆ ತಲುಪುತ್ತಿರುವ ಬಗ್ಗೆ ನಿತ್ಯ ಪ್ರಯಾಣಿಕರು ಚರ್ಚಿಸುತ್ತಿದ್ದರು. ಆದ್ದರಿಂದ ಈ ಸಮಸ್ಯೆ ಬಗೆಹರಿಯಲು ಏನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
Be the first to comment on "ಎಕ್ಸ್ ಪ್ರೆಸ್ ರೈಲುಗಳ ವಿಳಂಬ ಪ್ರಯಾಣಕ್ಕೆ ಪುತ್ತೂರು ಪ್ಯಾಸೆಂಜರ್ ರೈಲು ಬಲಿಯಾಯಿತೇ?"