ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೋಹನ್ ಕುಮಾರ್ ಮತ್ತು ಕೆಂಪರಾಜ್ ಬಂಧಿತರು.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖೋಟಾ ನೋಟ ಪ್ರಕರಣದಲ್ಲಿ, ನ್ಯಾಯಾಲಯಕ್ಕೆ ಹಾಜರಾಗದೇ ಆಸ್ತಿ ಜಪ್ತಿ ವಾರಂಟ್ ಹೊರಡಿಸಿದರು ಸಿಗದೇ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಕರಣದ ಆರೋಪಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ದೇವಾಂಗ ಬೀದಿ ಮನೆ ಮೋಹನ್ ಕುಮಾರ್ ಎಂಬಾತನನ್ನು ಬೆಂಗಳೂರು ಗೊಲ್ಲಹಳ್ಲಿ ಬಸ್ಸು ತಂಗುದಾಣದ ಬಳಿಯಿಂದ, ಹಾಗೂ ಸುಮಾರು 4 ವರ್ಷ ದಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ಜೋಗಿಹಳ್ಳಿ ಗೇಟ್ ಮನೆ ನಿವಾಸಿ ಕೆಂಪರಾಜ್ ಎಂಬಾತನನ್ನು ಮುಳಬಾಗಿಲು ಬಸ್ಸು ತಂಗುದಾಣದ ಬಳಿಯಿಂದ ಧರ್ಮಸ್ಥಳ ಠಾಣಾ ( ಅಪರಾಧ) ಪಿ.ಎಸ್.ಐ. ಸಮರ್ಥ ಆರ್.ಗಾಣಿಗೇರ್, ಎಚ್.ಸಿ. ರಾಜೇಶ್, ಪಿ.ಸಿ. ವಿನಯ ಕುಮಾರ್ ರವರ ತಂಡ ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ ಡಿ.21 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
Be the first to comment on "ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ"