ಕಡೇಶಿವಾಲಯದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ: ಗಮನ ಸೆಳೆದ ಪ್ರತಿಭಾ ಪ್ರದರ್ಶನ

ಮಕ್ಕಳ ಕಲಾಲೋಕ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ 17 ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಕಡೇಶಿವಾಲಯದ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಮಿತ್ತಿಮಾರು ಭುಜಂಗ ಶೆಟ್ಟಿ ಸಭಾಂಗಣ ಪಲಿಮಾರು ಜನಾರ್ದನ ಪೈ ವೇದಿಕೆಯಲ್ಲಿ ಸಂಪನ್ನಗೊಂಡಿತು.

ಗ್ರಾ.ಪಂ ಅಧ್ಯಕ್ಷೆ ಭಾರತಿ ಎಸ್ ರಾವ್ ಮೆರವಣಿಗೆ ಉದ್ಘಾಟಿಸಿದರು.ಎಸ್.ಡಿ.ಎಸ್.ಸಿ ಅಧ್ಯಕ್ಷ ಹರಿಶ್ಚಂದ್ರ ಎಂ. ಕನ್ನಡ ಧ್ಜಜಾರೋಹಣ ನೆರವೇರಿಸಿದರು. ಕ.ಸಾ.ಪ. ದ ಪಾಣೆಮಂಗಳುರು ಹೋಬಳಿ ಅಧ್ಯಕ್ಷ ಮಹಮ್ಮದ್ ಪಿ. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಿದರು. ತನ್ವಿ ಮತ್ತು ಬಳಗ ನಾಡಗೀತೆ ಹಾಡಿದ್ದು, ದೈಹಿಕ ಶಿಕ್ಷಕ ಭಾಸ್ಕರ ನಾಯ್ಕ,  ಪೀರಾಜ್ ವಾಬಳೆ ಮೆರವಣಿಗೆ ವ್ಯವಸ್ಥೆಗೊಳಿಸಿದ್ದರು. ಚೆಂಡೆ ಸಹಿತ ಕೊಂಬು ವಾದನದೊಂದಿಗೆ  ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು

ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಬಾಯಾರು ಪ್ರಸ್ತಾವನೆ ಮಾಡಿದರು.ಮಾಣಿ ಪ್ರಾಥಮಿಕ ಶಾಲೆಯ ಪ್ರಥಮ ಕೆ. ಸ್ವಾಗತಿಸಿದರು. ಕಡೇಶಿವಾಲಯದ ಚಿನ್ಮಯಿ ಸ್ಫೂರ್ತಿ ಗೀತೆ ಹಾಡಿದರು.ದ.ಕ.ಜಿ.ಪ ಹಿ.ಪ್ರಾ. ಶಾಲೆ ಓಜಾಲ ಶಾಲೆಯ ವಿದ್ಯಾರ್ಥಿನಿ ಶ್ರುತಿಕಾ ಬಾಕಿಮಾರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮಕ್ಕಳ ಕಲಾಲೋಕ ಉತ್ತಮ ವೇದಿಕೆಯಾಗಿದೆ ಎಂದರು.

ಕಡೇಶಿವಾಯ ಶಾಲೆಯ ಸಾನ್ವಿ ಸುವರ್ಣ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ ಗುರುಗಳ ಮಾರ್ಗದರ್ಶನದಿಂದ ಹೆತ್ತವರ ಆಶೀರ್ವಾದದಿಂದ ಸಮ್ಮೇಳನಾಧ್ಯಕ್ಷೆಯಾಗುವ ಅವಕಾಶ ಸಿಕ್ಕಿತು. ಸಾಹಿತ್ಯದ ಪರಿಚಯವನ್ನು ಮಾಡುವ ಮೂಲಕ ಬರೆಯುವ ಆಸಕ್ತಿಯನ್ನು ಮೂಡಿಸುವುದಕ್ಕೆ ಸಮ್ಮೇಳನವು ಸಹಕಾರಿಯಾಗಿz ಎಂದು ಅಭಿಪ್ರಾಯ ತಿಳಿಸಿದರು.

ಕವಿ ವಿಶ್ವನಾಥ ಕುಲಾಲ್ ಮಿತ್ತೂರುಇವರು ಶರಣ್ಯ ಪಾಂಡೇಲು ಓಜಾಲ ಅವರ ಹಾಯ್ಕು, ಶ್ರುತಿಕಾ ಪಾಂಡೇಲು  ಅವರ ಜಗದ ನಿಯಮ, ನಿರಂಜನ ನಾಯ್ ವಿಟ್ಲ ಸಂಪಾದಿಸಿದ ಮಕ್ಕಳ ಕವನ ಸಂಕಲನ ಕೃತಿಗಳನ್ನು ಬಿಡುಗಡೆ ಮಾಡಿದರು. ಮಾಣಿ ಬಾಲವಿಕಾಸದ ಸ್ವಸ್ತಿ ಕಾರ್ಯಕ್ರಮ ನಿರ್ವಹಿಸಿದ್ದು , ಅಳಿಕೆ ಶಾಲೆಯ ಧನ್ವಿತಾ ಕಾರಂತ್ ವಂದಿಸಿದರು.

ನೀತಿ ಬೋಧಕ ಕಿರು ನಾಟಕಗಳು

ವಿವಿಧ ಶಾಲೆಗಳ 7 ಕಿರು ನಾಟಕಗಳು ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳು ನೀತಿ ಬೋಧಕಕತೆಗಳನ್ನು ಆಯ್ದು ನಾಟಕ ರೂಪದಲ್ಲಿ ಪ್ರದರ್ಶನ ಮಾಡಿ ಹೆತ್ತವರ ಮೆಚ್ಚುಗೆಗೆ ಪಾತ್ರರಾದರು. ಶಿಕ್ಷಕ ಜಯರಾಮ ಡಿ , ವಿದ್ಯಾರ್ಥಿಗಳಾದ ಹರ್ಷನ್ ಕುಲಾಲ್  ಶೇರಾ, ಪ್ರಖ್ಯಾತ್ ರಾವ್ ಕಡೇಶಿವಾಲಯ, ಧೃತಿ ಏಮಾಜೆ  ನಿರ್ವಹಿಸಿದರು.

ಕವಿಗಳ ಕವನಗಳ  ಚಿತ್ತಚಿತ್ತಾರ

ಚಿತ್ತಚಿತ್ತಾರ ಕಾರ್ಯಕ್ರಮದಲ್ಲಿ ೧೧ ಶಾಲೆಗಳ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಹಿರಿಯ ಕವಿಗಳಾಗಿರುವ ಜಯಾನಂದ ಪೆರಾಜೆ , ಸೀತಾಲಕ್ಷ್ಮೀ ವರ್ಮ ವಿಟ್ಲ, ಸವಿತಾ ಅಡ್ವಾಯಿ , ರಾಧಾಕೃಷ್ಣ ವರ್ಮ,  ಜಯರಾi ಪಡ್ರೆ, ವಿಶ್ವನಾಥ ಮಿತ್ತೂರು ಇವರ ಕವನಗಳನ್ನು ಹಾಡಿ ನೃತ್ಯ ಪ್ರದರ್ಶನ ಮಾಡುವುದರೊಂದಿಗೆ ಚಿತ್ರ ಬಿಡಿಸುವ ಮೂಲಕ ಚಿತ್ತಚಿತ್ತಾರ ಕಾರ್ಯಕ್ರಮ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ನೂರಾರು ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು.

ಬಹುಬಗೆಯ ಸಾಹಿತ್ಯ ಗೋಷ್ಠಿ

500 ರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸ್ವರಚಿತ ಕಥೆ, ಕವನ , ಚುಟುಕು ವಾಚನ , ಆಶುಮಾತುಕತೆ ಮತ್ತು ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿ ಪ್ರತಿಭಾ ಪ್ರದರ್ಶನ ಮಾಡಿದರು.

ಸಾಹಿತ್ಯ ತಾರೆ ಪ್ರಶಸ್ತಿ

ಶ್ರೀ ಶಾರದಾ ಪ್ರೌಢ ಶಾಲೆ ಪಾಣೆಮಂಗಳೂರು ಶಾಲೆಯ ವಿದ್ಯಾರ್ಥಿಗಳ ವಾರ್ಷಿಕ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ವಿವಿಧ ಕಲೆಗಳಲ್ಲಿ ಪ್ರೋತ್ಸಾಹ ನೀಡುತ್ತಿರುವ ಕಲಾವಿದ ರಾಜೇಶ ವಿಟ್ಲ ಇವರಿಗೆ ಬಾಲಬಂಧು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪುಸ್ತಕ ಸ್ಮರಣಿಕೆ  ಸ್ಪೂರ್ತಿ ಪತ್ರಗಳ ವಿರತಣೆ ಮಾಡಿ ಅಭಿನಂದಿಸಲಾಯಿತು. ಸಮ್ಮೇಳನಕ್ಕೆ ಸಹಕಾರ ನೀಡಿದ ಮಹನೀಯರನ್ನು ಗುರುತಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಪ್ರೇಮಾ ಕಡೇಶಿವಾಲಯ,  ವಸಂತಿ ಎಲ್ ಕಡೇಶಿವಾಲಯ, ಇಸ್ಮಾಯಿಲ್  ಅಳಿಕೆಮಜಲು,  ಜಯರಾಮ ಡಿ. ಶಂಭೂರು, ಸಂಜೀವ ಎನ್. ಮಿತ್ತೂರು ಗೋಪಾಲಕೃಷ್ಣ ನೇರಳಕಟ್ಟೆ ನಾರ್ಶ ಮೈದಾನ, ತುಳಸಿ ಎಸ್. ಬಿಳಿಯೂರು, ಯಜ್ಞೇಶ್ವರಿ ಎನ್. ಬಾಲವಿಕಾಸ ಮಾಣಿ, ಮುಹಮ್ಮದ್ ಸಾಬಿತ್ ಸುರಿಬೈಲು, ಸಾವಿತ್ರಿ ಸತ್ತಿಕಲ್ಲು, ಶ್ರೀಪತಿ ನಾಯಕ್ ನಾಟೆಕಲ್ಲು,  ಎಂ.ಕೆ. ನಾಯ್ಡ್ ಮರಕ್ಕಿಣಿ ಪೆರುವಾಯಿ ಸಹಕರಿಸಿದರು. ಪ್ರಥಮ ಕೆ. ಮಾಣಿ, ಆರಾಧ್ಯ ರೈ ಕೆ. ಕಡೇಶಿವಾಲಯ, ಶಿರ್ಷಿಕಾ ಆರ್ ಬರಿಮಾರು, ಅನನ್ಯ ವಿ. ವಿಟ್ಲ, ವೈಭವ್ ಎನ್ ಕೆದಿಲ,  ಯತಿನ್ ಸತ್ತಿಕಲ್ಲು, ಲಿಖಿತಾ ಅನಂತಾಡಿ, ಅಮೃತಾ ಕುಲಾಲ್ ಪೆರಾಜೆ, ವೈಷ್ಣವಿ ಎನ್. ಬಿಳಿಯೂರು, ಕೌಶೀಲ ನಾರ್ಶಮೈದಾನ, ಅಕ್ಷರ ಶ್ಯಾಮ ವಿಟ್ಲ, ಶಶಾಂಕ್ ಬಂಟ್ರಿಂಜ, ಗ್ಲೆನಿಶಾ ಶರ್ಲಾ ವಾಸ್  ನರಿಕೊಂಬು, ಮಾನಸ ಕಡೇಶಿವಾಲಯ, ಧನ್ವಿತಾ ವೀರಕಂಭ, ಸ್ಪೂರ್ತಿ ಕಲ್ಲಡ್ಕ,  ಕಾರ್ತಿಕೇಯ ಆರ್. ಮಯ್ಯ  ಮಂಗಳೂರು,  ನಿರೀಕ್ಷಾ ಕೆ. ಚಂದಳಿಕೆ ಮೊದಲಾದ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಜನಮೆಚ್ಚುಗೆ ಪಡೆದ ಮಕ್ಕಳ ಸಮ್ಮೇಳನ

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಿಳಿಯೂರು ಗುತ್ತು ಕಿಟ್ಟಣ್ಣ ಶೆಟ್ಟಿ, ಕಾರ್ಯಾಧ್ಯಕ್ಷ ಹರಿಶ್ಚಂದ್ರ ಎಮ್ . ಕ್ಷೇತ್ರಶಿಕ್ಷಣಾಧಿಕಾರಿ ಮಂಜುನಾಥ ಎಮ್.ಜಿ., ಉಪಾಧ್ಯಕ್ಷ ಗಿರಿಯಪ್ಪ ಗೌಢ ಶಾಂತಿಲ , ಕೋಶಾಧಿಕಾರಿ ಮಾಧವ ರೈ ಅಮೈ,ಕಡೇಶಿವಾಲಯ  ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ. ಹಾಗೂ ಶಿಕ್ಷಕ ವೃಂದದವರು ವಿವಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಕಡೇಶಿವಾಲಯದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ: ಗಮನ ಸೆಳೆದ ಪ್ರತಿಭಾ ಪ್ರದರ್ಶನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*