ಉಪ್ಪಿನಂಗಡಿ: ಮಾದಕ ವಸ್ತು ಎಂಡಿಎಂಎ ಹೊಂದಿದ್ದ ಮೂವರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸುಶ್ರುತಕೃಷ್ಣ ಜೆ.ಕೆ, (32) ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಸೆಬಾಸ್ಟಿಯನ್ (31) ಮತ್ತು ಕೇರಳ ಇಡುಕ್ಕಿ ಜಿಲ್ಲೆಯ ಅನಿಲ್ ಥೋಮಸ್ (31) ಬಂಧಿತರು.
ಪುತ್ತೂರು ತಾಲೂಕು ಉಪ್ಪಿನಂಗಡಿ ರಾ.ಹೆ 75ರಲ್ಲಿ ಸಬ್ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ತಪಾಸಣೆಯ ನಿಮಿತ್ತ ವೆನ್ಯೂ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ, ವಾಹನವನ್ನು ನಿಲ್ಲಿಸಿದ ಚಾಲಕ ಹಾಗೂ ವಾಹನದಲ್ಲಿದ್ದ ಇನ್ನಿಬ್ಬರು ಪರಾರಿಯಾಗಲು ಯತ್ನಿಸಿದಾಗ ಅವರನ್ನು ಹಿಡಿದುಕೊಂಡು ವಿಚಾರಿಸುವ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಅಂದಾಜು ರೂ 45.000 ಮೌಲ್ಯದ 22.4 ಮಿಲಿ ಗ್ರಾಂ ತೂಕದ ಎಂ ಡಿ ಎಂ ಎ ಎಂಬ ಮಾದಕ ವಸ್ತು ಪತ್ತೆಯಾಗಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಗಳೊಂದಿಗೆ, ಸದರಿ ಮಾದಕವಸ್ತು, ಆರೋಪಿಗಳ ಬಳಿಯಿದ್ದ 03 ಮೊಬೈಲ್ ಪೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 162/2023 ಕಲಂ: U/s-8(c) 22(b) ಎನ್.ಡಿ.ಪಿ.ಎಸ್ ಕಾಯ್ದೆ r/w 34 ipc ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Be the first to comment on "ಮಾದಕ ವಸ್ತು ಎಂಡಿಎಂಎ ಹೊಂದಿದ್ದ ಮೂವರ ಬಂಧಿಸಿದ ಪೊಲೀಸರು"