ಲೊರೆಟ್ಟೊದಲ್ಲಿ ಗುರುವಾರ ಬೆಳಗ್ಗೆ ನಡೆದ ಘಟನೆಯಲ್ಲಿ ಜಲ್ಲಿ ಸಾಗಿಸುವ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಯಾರಿಗೂ ಏನೂ ಅಪಾಯ ಉಂಟಾಗಿಲ್ಲ. ಬ್ಯಾರಿಕೇಟ್ ಹಾಕಿದ ಜಾಗದಲ್ಲೂ ವಾಹನದ ಚಾಲಕರು ಅವುಗಳನ್ನು ಗಮನಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆತಂಕ.
ಲಾರಿಯ ಚಾಲಕರು ರಸ್ತೆ ಕಡೆ ಗಮನ ಕೊಡುವುದಿಲ್ಲ, ಲಾರಿಯಲ್ಲಿ ಅಧಿಕ ಭಾರ ಹೊರಲಾಗುತ್ತದೆ, ಎಂದು ದೂರಿದ ಸಾರ್ವಜನಿಕರು, ಇತರ ವಾಹನಗಳ ಬಗ್ಗೆ ಗಮನವಿಲ್ಲದೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬರುತ್ತಾರೆ ಎಂದು ಸ್ಥಳಕ್ಕೆ ಆಗಮಿಸಿದ ಪೊಲೀಸರಲ್ಲಿ ದೂರಿದರು. ಅಪಘಾತ ನಡೆದ ಜಾಗದಲ್ಲಿ ಶಾಲೆಯಿದ್ದು, ಮಕ್ಕಳು ಶಾಲೆಗೆ ಬರುವ ಸಮಯದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯ ಚಾಲನೆ ಮಾಡಿದರೆ ಅನಾಹುತಗಳು ನಡೆಯಬಹುದು, ಎಂದು ಆರೋಪಿಸಿರುವ ಸಾರ್ವಜನಿಕರು, ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಹಾಕಿ ಎಂದು ಒತ್ತಾಯಿಸಿದರು. ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಸುತೇಶ್, ಮತ್ತು ಸಂಜೀವ ಹಾಗೂ ಎಎಸ್.ಐ ಸುರೇಶ್ ಪಡಾರ್, ಸಿಬ್ಬಂದಿಗಳಾದ ರಾಜು, ವಿವೇಕ್, ಸಂತೋಷ ಬೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
Be the first to comment on "ಲೊರೆಟ್ಟೊ: ಲಾರಿ ಡಿಕ್ಕಿಯಾಗಿ ಕಾರು ಜಖಂ"