ಅಕ್ಷರ ದಾಸೋಹ ನೌಕರರಿಗೆ ಚುನಾವಣೆ ಸಂದರ್ಭದಲ್ಲಿ ಸಂಬಳ ಏರಿಕೆ ಮಾಡುವ ಬಗ್ಗೆ ನೀಡಿದ ಭರವಸೆಯನ್ನು ಕೂಡಲೇ ಈಡೇರಿಸಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿ.ಸಿ.ರೋಡ್ ಆಡಳಿತ ಸೌಧದ ಮುಂಭಾಗ ಕರ್ನಾಟಕ ರಾಜ್ಯ ಪ್ರಗತಿಪರ ಅಕ್ಷರ ದಾಸೋಹ ನೌಕರರ ಸಂಘ ಎ.ಐ.ಸಿ.ಸಿ.ಟಿ.ಯು ವತಿಯಿಂದ ಪ್ರತಿಭಟನೆ ನಡೆಯಿತು.
ಎ.ಐ.ಸಿ.ಸಿ.ಟಿ.ಯು ಜಿಲ್ಲಾ ಅಧ್ಯಕ್ಷರಾದ ರಾಮಣ್ಣ ವಿಟ್ಲ ಮಾತನಾಡಿ ಅಕ್ಷರ ದಾಸೋಹ ನೌಕರರು ಕಳೆದ ಇಪ್ಪತ್ತು ವರ್ಷಗಳಿಂದ ಕಡಿಮೆ ವೇತನ ದಲ್ಲಿ ದುಡಿಯುತ್ತಿದ್ದು 3 ತಿಂಗಳಿಂದ ಸಂಬಳ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು
ಚುನಾವಣೆ ಸಂಧರ್ಭದಲ್ಲಿ ಸಂಬಳ ಏರಿಕೆ ಮಾಡುವುದಾಗಿ ಭರವಸೆ ನೀಡಿದ್ದು ಸರಕಾರ ಈ ವರೆಗೆ ಏರಿಕೆ ಮಾಡಿರುವುದಿಲ್ಲ ಕೂಡಲೇ ವೇತನ ಏರಿಕೆ ಮಾಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು.
ಪ್ರತಿಭಟನೆ ನಂತರ ತಹಸೀಲ್ದಾರ್ ಮುಖಂತರ ಮುಖ್ಯಮಂತ್ರಿ ಗಳಿಗೆ ಹಾಗೂ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಜಯಶ್ರೀ ಆರ್.ಕೆ ಸ್ವಾಗತಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘದ ಕಾರ್ಯದರ್ಶಿ ವಾಣಿಶ್ರೀ , ಮುಖಂಡರಾದ ಜಯಂತಿ ಶಂಭೂರು, ವಾಣಿಶ್ರೀ ,ವಿನಯ ನಡುಮೊಗರು, ಮಮತಾ ಬಿಳಿಯೂರು ,ಯಶೋಧ, ರೇಖಾ,ಶಕುಂತಳಾ ಮುಂತಾದವರು ನೇತೃತ್ವ ವಹಿಸಿದ್ದರು.
Be the first to comment on "ಬೇಡಿಕೆ ಈಡೇರಿಸದಿದ್ದರೆ ಬಿಸಿಯೂಟ ಬಂದ್ ಮಾಡಿ ಹೋರಾಟ"