ಪ್ರಾದೇಶಿಕವಾರು ಜಾತಿ ವಿಂಗಡನೆಯಲ್ಲಿ ನಾವು ಸೋತಿದ್ದೇವೆ. ವಿಶ್ವದಲ್ಲಿ ನಾವು ಗರಿಷ್ಠ ಸಂಖ್ಯೆಯಲ್ಲಿದ್ದರೂ ಜಾತಿಗಣತಿಯಲ್ಲಿ ನಾವು ಕನಿಷ್ಟರಾಗಿದ್ದೇವೆ ಅದಕ್ಕೆ ಕಾರಣ ನಮ್ಮ ಕುಲಕಸುಬು ಒಂದೇ ಆಗಿದ್ದರೂ ಬೇರೆ ಬೇರೆ ಜಾತಿ ಹೆಸರಲ್ಲಿ ನಮ್ಮ ಕುಲ ಬೇರ್ಪಡಿಸಿದೆ, ನಮ್ಮ ಒಗ್ಗಟ್ಟಿನ ಶಕ್ತಿ ಇನ್ನೂ ಹೆಚ್ಚಬೇಕು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಬಂಟ್ವಾಳದಲ್ಲಿ ಕರ್ನಾಟಕ ರಾಜ್ಯ ಕುಲಾಲ- ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನಸಭಾ ಕ್ಷೇತ್ರದ 2023-25 ರ ಸಾಲಿನ ನೂತನ ಆಡಳಿತ ಸಮಿತಿಯ ಪದಪ್ರದಾನ, ನೂತನ ಕಚೇರಿ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ “ಒಸರ್ದ ಕಂಡೊಡು ಕೆಸರ್ದ ಗೊಬ್ಬುಲು” ಕೆಸರುಗದ್ದೆ ಪಂದ್ಯಾಟದಲ್ಲಿ ಅವರು ಮಾತನಾಡಿದರು.
ಮುಳಿಯ ಶ್ರೀ ವೈಷ್ಣವಿ ಆದಿಶಕ್ತಿ ಕ್ಷೇತ್ರದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸಂಘಟನೆಗಳು ದುಂದುವೆಚ್ಚ ಬಿಟ್ಟು ಸಾಮೂಹಿಕ ಮದುವೆಯ ಮೂಲಕ ಸಮುದಾಯದ ಬಡ ಹೆಣ್ಮಕ್ಕಳ ಮತ್ತು ಅವರ ಹೆತ್ತವರ ಕಣ್ಣೀರು ಒರಸುವ ಕೆಲಸ ಮಾಡಿ ಪುಣ್ಯ ಸಂಪಾದಿಸಬೇಕು ಎಂದರು.
ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿ ಉಪಸ್ಥಿತರಿದ್ದು ಮಾತನಾಡಿ, ಕೃಷಿ ಪ್ರಧಾನ ಈ ಭೂ ನೆಲದಲ್ಲಿ ಆದುನಿಕ ಅವಿಷ್ಕಾರಗಳು ವಿಜ್ರಂಭಿಸಿದರೂ ಮಣ್ಣಿನ ಅಂತರ್ ಸತ್ವವನ್ನು ಆಹ್ವಾದಿಸುವುದು, ಕೆಸರ ಗದ್ದೆಯಲ್ಲಿ ಮನೋರಂಜನೆಯ ಮೂಲಕ ಮಕ್ಕಳಾದಿಯಾಗಿ ಹಿರಿಯರ ವರೆಗೆ ಆಟ ಪಂದ್ಯಾಟದ ಮೂಲಕ ನಲಿಯುವುದು ಒಂದು ಅವಕಾಶ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ.ಕುಂಬಾರ ಫೆಡರೇಷನ್ ನ ಅಧ್ಯಕ್ಷ ಡಾ. ಶಿವಕುಮಾರ್ ಚೌಡಶೆಟ್ಟಿ. ಕ.ರಾ.ಕು.ಕುಂ. ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್. ಬೆಂಗಳೂರಿನ ಉದ್ಯಮಿಗಳಾದ ಕೇಶವ ಬಾಳೆಹಿತ್ಲು. ರಮೇಶ್ ಬಾಳೆಹಿತ್ಲು, ಯುವ ವೇದಿಕೆ ರಾಜ್ಯಾಧ್ಯಕ್ಷ ಗಂಗಾಧರ್ ಬಂಜನ್, ವಿಭಾಗೀಯ ಕಾರ್ಯದರ್ಶಿ ಅನಿಲ್ ದಾಸ್, ರಾಜ್ಯ ಕಾರ್ಯದರ್ಶಿ ಜಯೇಶ್ ಗೋವಿಂದ್, ಹಾಗೂ ರಾಜ್ಯದ ಪದಾದಿಕಾರಿಗಳು ಊರ ಮತ್ತು ಪರವೂರ ಸಂಘಟನೆ ನಾಯಕರು, ಉದ್ಯಮಿಗಳು, ಸಾಧಕರು ಭಾಗವಹಿಸಿದ್ದರು.
ಮಾಜಿ ಅಧ್ಯಕ್ಷರಾದ ಸಂತೋಷ್ ಮರ್ತಾಜೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಿತೀಶ್ ಕುಲಾಲ್ ಪಲ್ಲಿಕಂಡ ಇವರಿಗೆ ಅಧಿಕಾರ ಹಸ್ತಾಂತರಿಸಿದರು, ನೂತನ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆಯಾದ ವಿಜಯಶ್ರೀ ವೇದಿಕೆಯಲ್ಲಿದ್ದರು. ಈ ಸಾಲಿನ ಸರ್ವಜ್ಞ ಪ್ರಶಸ್ತಿಯನ್ನು ಸಾಮಾಜಿಕ ಸೇವೆಯಲ್ಲಿ ಸದಾಶಿವ ವಗ್ಗ, ಕುಂಬಾರಿಕೆಯಲ್ಲಿ ಮಾದಪ್ಪ ಮೂಲ್ಯ ನೆಲ್ಲಿ, ಧಾರ್ಮಿಕ ರಂಗದಲ್ಲಿ ಸೌತಡ್ಕ ಫರ್ನೀಚರ್ ನ ನಾಗೇಶ್ ಕುಲಾಲ್, ಉದ್ಯಮ ತೇಜಸ್ವಿ ರಾಜ್, ಸಂಘಟನೆ ಟಿ.ಶೇಷಪ್ಪ ಮೂಲ್ಯ ಸ್ವೀಕರಿಸಿದರು ಮಾಜಿ ಆದ್ಯಕ್ಷರಾದ ಸಂತೋಷ್ ಮರ್ತಾಜೆಯವರನ್ನು ಗತ ವರ್ಷದ ಅಧ್ಯಕ್ಷೀಯ ಸೇವೆಗಾಗಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾದ ನಿತೀಶ್ ಕುಲಾಲ್ ಪಲ್ಲಿಕಂಡ ಅಧ್ಯಕ್ಷೀಯ ಮಾತುಗಳನ್ನಾಡಿದರು. ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ. ಸ್ವಾಗತಿಸಿ, ಕಾರ್ಯದರ್ಶಿ ಕಾರ್ತಿಕ್ ಮೈಯರಬೈಲು ವಂದಿಸಿದರು ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಕುಂಬಾರ ಸಮುದಾಯದ ಶ್ರೇಯೋಭಿವೃದ್ಧಿ ಸಂಘಟನೆಯ ಕರ್ತವ್ಯ: ಮಾಣಿಲ ಶ್ರೀಗಳು"