ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ದಕ್ಷಿಣ ಕನ್ನಡ ಪ್ರಾಣಿ ದಯಾ ಸಂಘ (ರಿ.) ಮಂಗಳೂರು, ಗ್ರಾಮ ಪಂಚಾಯತಿ ತುಂಬೆ, ಪಶು ಸಂಗೋಪನ ಇಲಾಖೆ ಬಂಟ್ವಾಳ ತಾಲೂಕು ಜಂಟಿ ಸಹಯೋಗದೊಂದಿಗೆ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮ ಬೆಂಜನಪದವು ಪಶು ಚಿಕಿತ್ಸಾಲಯದಲ್ಲಿ ನಡೆಯಿತು.
ತುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಕೇಶವ, ಪಶು ಸಂಗೋಪನ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಡಾ. ಅರುಣ್ ಕುಮಾರ್ ಶೆಟ್ಟಿ, ಪಶು ಆಸ್ಪತ್ರೆ ಬಂಟ್ವಾಳ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಅವಿನಾಶ್ ಭಟ್, ಪಶು ಚಿಕಿತ್ಸಾಲಯ ಬೆಂಜನಪದವು ಪಶು ವೈದ್ಯಾಧಿಕಾರಿ ಡಾ.ಕಾರ್ತಿಕ್ ಪಿ., ಪಶುವೈದ್ಯ ಪರೀಕ್ಷಕ ಸುರೇಶ್ ಎಲ್ ಜೆ, ತುಂಬೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಣೇಶ್ ಸಾಲಿಯನ್, ಸದಸ್ಯ ಪ್ರವೀಣ್ ತುಂಬೆ, ಗ್ರೀನ್ ಪೂಟ್ ಪ್ರಿಂಟ್ಸ್ ಕಾರ್ಯದರ್ಶಿ ಡಾ.ವಿಜಯ ಕಾಮ್ಲೆ ಉಪಸ್ಥಿತರಿದ್ದರು. ತುಂಬೆ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ 18 ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ನಡೆಸಲಾಯಿತು
Be the first to comment on "ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಪ್ರಕ್ರಿಯೆಗೆ ಚಾಲನೆ"