ಶತಮಾನ ಕಂಡ ಉಕ್ಕಿನ ಸೇತುವೆ ಎಂಬ ಖ್ಯಾತಿಯ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಕಟ್ಟಿದ ಬ್ರಿಟಿಷರ ಕಾಲದ ಸೇತುವೆಯಲ್ಲಿ ಬಿರುಕು ಕಂಡಿದೆ. ಭಾನುವಾರ ರಾತ್ರಿ ಇದನ್ನು ಕಂಡ ಸ್ಥಳೀಯರು ಕೂಡಲೇ ಇಲಾಖೆಗೆ ಮಾಹಿತಿ ನೀಡಿದ್ದು, ಕಂದಾಯ ಇಲಾಖಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸೇತುವೆಯ ಮೇಲಿನ ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಇದು ಸೇತುವೆಯ ಬಿರುಕೇ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎಂಬುದು ಪರಿಶೀಲನೆ ಬಳಿಕ ಗೊತ್ತಾಗಬೇಕಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆಯಲ್ಲಿ ಈ ಹಿಂದೆಯೇ ಬಿರುಕು ಕಾಣಿಸಿಕೊಂಡು ಬಳಿಕ ಘನ ವಾಹನಗಳ ಸಂಚಾರ ಅಪಾಯಕಾರಿ ಎಂಬ ವರದಿ ನೀಡಲಾಗಿತ್ತು. ಆದರೆ ಕಾಲಕ್ರಮೇಣ ಘನ ವಾಹನಗಳು ಕೂಡ ಸಂಚಾರ ನಡೆಸುತ್ತಿದ್ದವು. ಇದೀಗ ಮತ್ತೆ ಸೇತುವೆಯಲ್ಲಿ ಬಿರುಕಿನ ಮಾದರಿ ಕಂಡುಬಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ,
Be the first to comment on "ಪಾಣೇರ್ ಸಂಕದ ರಸ್ತೆಯಲ್ಲಿ ಬಿರುಕು…ಸಂಚಾರಕ್ಕೆ ಡೇಂಜರ್!!"