ಹಿಂದಿ ಶಿಕ್ಷಕರಿಗೆ ಕೊಡುವ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ರಮಾನಂದ ನೂಜಿಪ್ಪಾಡಿ ಆಯ್ಕೆಯಾಗಿದ್ದಾರೆ.
ಹಿಂದಿ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ತಾಲೂಕು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ, ಹಿಂದಿ ಸಂಪನ್ಮೂಲ ಕ್ರೋಡಿಕರಣ ಹಾಗೂ ಪುಸ್ತಕ ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಪ್ರಯತ್ನ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಾದ ರಮಾನಂದ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯ ಹಿಂದಿ ಶಿಕ್ಷಕರತ್ನ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. 2021 – 22 ರಲ್ಲಿ ಸ್ವಸ್ತಿಶ್ರೀ ಪ್ರಶಸ್ತಿ, ಶ್ಯಾಮರಾವ್ ಮೆಮೋರಿಯಲ್ ಉತ್ತಮ ಶಿಕ್ಷಕ ಪ್ರಶಸ್ತಿ, ಗುರುಶ್ರೇಷ್ಠ ರಾಜ್ಯ ಪ್ರಶಸ್ತಿ ಬಂದಿದೆ. 29ರಂದು ವಿಜಯಪುರದಲ್ಲಿ ನಡೆಯುವ ರಾಜ್ಯ ಹಿಂದಿ ಶಿಕ್ಷಕರ ಸಮ್ಮೇಳನ ಹಾಗೂ ಕಾರ್ಯಾಗಾರದಲ್ಲಿ ಇಲಾಖಾ ಉನ್ನತ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಸಚಿವರ ಮತ್ತು ಶಾಸಕರ ಉಪಸ್ತಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷರ ಸಂಘದ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷರಾದ ಗೀತಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ರಾಜ್ಯ ಹಿಂದಿ ಶಿಕ್ಷಕರತ್ನ ಪ್ರಶಸ್ತಿಗೆ ರಮಾನಂದ ನೂಜಿಪ್ಪಾಡಿ ಆಯ್ಕೆ"