ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಭಾಷಾ ಶಿಕ್ಷಕರ ಸಂಘ, ಹಿಂದಿ ಶಿಕ್ಷಕರ ಸಂಘ ಬಂಟ್ವಾಳ ಹಾಗೂ ತಹಸಿಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಗಳೂರು ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಹಿಂದಿ ಶೈಕ್ಷಣಿಕ ಕಾರ್ಯಾಗಾರ ಮತ್ತು ಹಿಂದಿ ದಿನದ ಕಾರ್ಯಕ್ರಮ ಬಿಸಿರೋಡಿನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಮಾತನಾಡಿ, ಭಾಷೆಯ ಪ್ರೇಮದ ವಿಶೇಷ ಕಾಳಜಿಯಿಂದ ಹಿಂದಿ ದಿನ ಆಚರಣೆ ಮಾಡಿರುವ ಸಂಘಟಕರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಬಂಟ್ವಾಳ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ.ಪೌಲಿ. ಎನ್.ವಿ ಅವರು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕ್ಷೇತ್ರಶಿಕ್ಷಣ ಸಂಪನ್ಮೂಲ ಅಧಿಕಾರಿ ರಾಘವೇಂದ್ರ ಬಲ್ಲಾಳ್ ,ಶಿಕ್ಷಣ ಸಂಯೋಜಕಿ ಸುಜಾತಕುಮಾರಿ, ಸರ್ಕಾರಿ ರಾಜ್ಯ ಸಹ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಮೊಹಮ್ಮದ್ ರಿಯಾಜ್, ಸರ್ಕಾರಿ ರಾಜ್ಯ ಸಹ ಶಿಕ್ಷಕರ ಸಂಘ ಅಧ್ಯಕ್ಷ ಜೋಯಲ್ ಲೋಬೋ, ಲಯನ್ಸ್ ಉಪಾಧ್ಯಕ್ಷ ರಾಧಕೃಷ್ಣ, ಮೈಸೂರು ವಿಭಾಗೀಯ ಅಧ್ಯಕ್ಷ ರಾಯಿ ರಾಜಕುಮಾರ್, ಜಿಲ್ಲಾ ಹಿಂದಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಗೀತಾಕುಮಾರಿ. ಎನ್. ವಿ. ಮಂಗಳೂರು ತಾ.ಅಧ್ಯಕ್ಷೆ ಮಹೇಶ್ ಕುಮಾರ್, ತರಬೇತುದಾರ ಡಾ. ಯೋಗೇಂದ್ರನಾಥ ಮಿಶ್ರಾ, ಗೌರವಾಧ್ಯಕ್ಷ ರಮಾನಂದ,,ಸಂಘದ ಕಾರ್ಯದರ್ಶಿ ಜೈರಾಮ್ , ಖಜಾಂಚಿ ಪಂಚಾಕ್ಷರಿ ಎಂ.ಪಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಿಂದಿ ಶಿಕ್ಷಕ ಪ್ರೇಮ್ ದಾಸ್ ಮತ್ತು ನಿವೃತ್ತ ಹಿಂದಿ ಶಿಕ್ಷಕಿ ಪ್ರೇಮ ಅವರನ್ನು ಗೌರವಿಸಲಾಯಿತು. ಹಿಂದಿ ವಿಷಯದಲ್ಲಿ ನೂರು ಶೇಕಡ ಫಲಿತಾಂಶ ಪಡೆದ ಶಾಲಾ ಶಿಕ್ಷಕರಿಗೆ,ಹಾಗೂ ಇತರ ಜಿಲ್ಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕರಿಗೆ ಗೌರವ ನೀಡಲಾಯಿತು. ದೀಪಿಕಾ ಧನ್ಯವಾದ ನೀಡಿದರು. ಶಂಕರ್ ಪಾಲಸ್ಕರ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಿಂದಿ ಶೈಕ್ಷಣಿಕ ಕಾರ್ಯಾಗಾರ"