ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಪೊಸಳ್ಳಿ ಕುಲಾಲ ಭವನದಲ್ಲಿ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ೨೦೨೩ ಕೃಷ್ಣ ವೇಷ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಚೆನ್ನಕೇಶವ ಕೃಷ್ಣನ ಸಂದೇಶ ನೀಡಿ ಶುಭಹಾರೈಸಿದರು. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಿಗೆ ಪ್ರಥಮವಾಗಿ ವೇದಿಕೆ ಸಿಗುವುದು ಮುದ್ದು ಕೃಷ್ಣ ಸ್ಪರ್ಧೆಯ ಮೂಲಕವಾಗಿರುತ್ತದೆ. ಆ ಮೂಲಕ ಅವರು ಮುಂದೆಯೂ ಭವಿಷ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಅವಕಾಶ ದೊರೆಯುತ್ತದೆ. ಕೃಷ್ಣಾಷ್ಟಮಿ ಮುಗಿದರೂ ನೂರಾರು ಕೃಷ್ಣರು ಒಟ್ಟಾಗಿ ವೇದಿಕೆಯಲ್ಲೇ ಶ್ರೀಕೃಷ್ಣಾಮಯವನ್ನಾಗಿಸಿದ ಈ ಕಾರ್ಯಕ್ರಮದಿಂದ ಮಕ್ಕಳು ಇನ್ನಷ್ಟು ಅವಕಾಶಗಳನ್ನು ಪಡೆಯುವಂತಾಯಿತು ಎಂದು ತಿಳಿಸಿದರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕುಲಾಲ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಖ್ಯಾತ ಹಾಡುಗಾರ ಶುಭಮ್, ಶಿಕ್ಷಣತಜ್ಞ ಲೋಕೇಶ್ ಕುಲಾಲ್ ನಾರ್ಶ, ಚಾಪರ್ಕ ತಂಡದ ನಟ ಸುರೇಶ್ ಕುಲಾಲ್, ರಂಗ ಕಲಾವಿದ ಮೇದಾವಿ ಮಡಂತ್ಯಾರ್, ಯೋಗ ಶಿಕ್ಷಕ ಕಿಶೋರ್ ಕೈಕುಂಜೆ, ಚಲನಚಿತ್ರ ಕಲಾ ನಿರ್ದೇಶಕ ರಾಜೇಶ್ ಕೊಳಕೆ, ಡಾ. ಅಶ್ವಿನಿ ಬಾಲಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ಉಪಸ್ಥಿತರಿದ್ದರು. ಸೇವಾದಳ ಕಾರ್ಯದರ್ಶಿ ಜಯಂತ ಅಗ್ರಬೈಲು ಸ್ವಾಗತಿಸಿದರು. ದಳಪತಿ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮನಾಥ ಕುಲಾಲ್ ನೇರಂಬೋಳ್ ಧನ್ಯವಾದ ನೀಡಿದರು. ವೈಷ್ಣವಿ ವೈ.ಕೆ., ನವ್ಯಾ ಕಾಮಾಜೆ, ವೀಕ್ಷಿತಾ ಕೈಕುಂಜೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಹೇಶ್ ಕುಲಾಲ್ ಕಡೇಶಿವಾಲಯ ನಿರ್ವಹಿಸಿದರು. ಗಣೇಶ್ ಕುಲಾಲ್ ಬೆದ್ರಗುಡ್ಡೆ, ದೇವದಾಸ ಅಗ್ರಬೈಲು, ರಾಜೇಶ್ ಭಂಡಾರಿಬೆಟ್ಟು, ಗಣೇಶ್ ಕುಲಾಲ್ ದುಗನಕೋಡಿ, ತಾರನಾಥ ಮೊಡಂಕಾಪು, ದರ್ಶನ್ ಮೊಡಂಕಾಪು, ಯಾದವ ಅಗ್ರಬೈಲು ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
Be the first to comment on "ಅಷ್ಟಮಿ ಮುಗಿದರೂ ನೂರಾರು ಕೃಷ್ಣರು ಕಂಡುಬಂದರು!!"