ಶೂನ್ಯ ಬಡ್ಡಿ ಬೆಳೆ ಸಾಲ 5 ಲಕ್ಷ ಹೆಚ್ಚಳ ಆದೇಶ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತನ್ನಿ, ಇಲ್ಲಿ ಪ್ರತಿನಿತ್ಯ ಸಹಕಾರ ಸಂಘದಲ್ಲಿ ಆದೇಶ ಬಂದಿದೆಯೇ ಎಂದು ಜನರು ಕೇಳುತ್ತಿದ್ದಾರೆ ಎಂದು ಸಹಕಾರ ಸಚಿವರಿಗೆ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರ ಬರೆದಿದ್ದಾರೆ.
ಬಜೆಟ್ ನಲ್ಲಿ ಪ್ರಕಟಿಸಿದಂತೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹಾಗೂ ಮಧ್ಯಮಾವಧಿ ಕೃಷಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ಹಾಗೂ ರೈತರಿಗೆ ಅನೂಕೂಲವಾಗುವ ರೀತಿಯಲ್ಲಿ ಶೇ 4 ದರದಲ್ಲಿ ಪಿಕಪ್ ವಾಹನ ಖರೀದಿಸಲು ಸಾಲ ನೀಡಲಾಗುವುದೆಂದು ಪ್ರಕಟಿಸಿರುವುದು ಸ್ವಾಗತರ್ಹವಾಗಿದೆ. ಈ ಪ್ರಕಟಣೆಯಂತೆ ರೈತರು ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅರ್ಜಿಗಳನ್ನು ಸಲ್ಲಿಸಿ ಸಾಲ ಮಿತಿ ಹೆಚ್ಚಳದ ಲಾಭ ಪಡೆಯಲು ನಿರೀಕ್ಷೆಯಲ್ಲಿದ್ದು, ಪ್ರತಿನಿತ್ಯ ಸಹಕಾರ ಸಂಘಗಳಿಗೆ ಹೋಗಿ ವಿಚಾರಿಸುತ್ತಿದ್ದಾರೆ. ಸಾಲ ಮಿತಿ ಹೆಚ್ಚಳವಾಗಿರುವ ಬಗ್ಗೆ ಸರಕಾರದಿಂದ ಆದೇಶ ಬಾರದಿರುವುದರಿಂದ ಪ್ರಾಥಮಿಕ ಸಹಕಾರ ಸಂಘಗಳು ಹೆಚ್ಚುವರಿ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ತಾವೂ ಬಜೆಟ್ ನಲ್ಲಿ ಪ್ರಕಟಿಸಿದಂತೆ ಸಾಲಮಿತಿ ಹೆಚ್ಚಳ ಮಾಡಿರುವ ಬಗ್ಗೆ ಸರಕಾರದ ಮಟ್ಟದಲ್ಲಿ ಸೂಕ್ತವಾದ ಆದೇಶ ಹೊರಡಿಸುವಂತೆ ಅವರು ವಿನಂತಿಸಿದ್ದಾರೆ.
Be the first to comment on "ಸಹಕಾರ ಸಚಿವರಿಗೆ ಸಹಕಾರಿ ಸಂಘದ ಅಧ್ಯಕ್ಷರ ಪತ್ರ: ‘’ಬಜೆಟ್ ನಲ್ಲಿ ಹೇಳಿದ್ದು ಕಾರ್ಯರೂಪಕ್ಕೆ ತನ್ನಿ’’"