ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಮುದ್ದು ಕೃಷ್ಣ ಫೊಟೋ ಸ್ಪರ್ಧೆ ಆಯೋಜಿಸಲಗಿದ್ದು, ಸೆ.15 ಕೊನೆಯ ದಿನಾಂಕ ಎಂದು ಬಂಟ್ವಾಳ ವಲಯ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಜಾಹೀರಾತು
ತಾಲೂಕು ಮಟ್ಟದ ಫೊಟೋ ಸ್ಪರ್ಧೆ ಇದಾಗಿದ್ದು, ಅಂಚೆ ಮೂಲಕ 6 ಬೈ 9 ಸೈಜ್ ಅಳತೆಯ ಫೊಟೋಗಳನ್ನು ತಾಲೂಕಿನ ಸಮೀಪದ ಸ್ಟುಡಿಯೋಗಳಲ್ಲಿ ನೀಡಬಹುದು. 3 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ, ಫೊಟೋದ ಹಿಂದೆ ಮಗುವಿಗೆ ಹೆಸರು ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯ, ಮೊಬೈಲ್ ಫೊಟೋಗಳಿಗೆ ಅವಕಾಶವಿಲ್ಲ. ಜನ್ಮದಿನಾಂಕದ ದಾಖಲೆ ನಕಲು ಕಡ್ಡಾಯ. ಮಗುವಿನ ಗರಿಷ್ಠ 3 ಫೊಟೋಗಳಿಗೆ ಅವಕಾಶ. ಸಂಘಟಕರ ತೀರ್ಮಾನವೇ ಅಂತಿಮ ಎಂದು ಅವರು ತಿಳಿಸಿದ್ದಾರೆ. ಅಂಚೆ ಮೂಲಕ ಕಳುಹಿಸುವವರು ಪ್ರೀತಿ ಸ್ಟುಡಿಯೋ, ಪದ್ಮಾ ಕಾಂಪ್ಲೆಕ್ಸ್, ಜೋಡುಮಾರ್ಗ ಪೋಸ್ಟ್, ಬಂಟ್ವಾಳ ತಾಲೂಕು 574219 ಸಂಖ್ಯೆಗೆ ಕಳುಹಿಸಬಹುದು, ಅಥವಾ ತನ್ನ ಸಮೀಪದ ಸ್ಟುಡಿಯೋಗಳಿಗೆ ನೀಡಬಹುದು ಎಂದವರು ಮಾಹಿತಿ ನೀಡಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಫೊಟೋಗ್ರಾಫರ್ಸ್ ಸಂಘದಿಂದ ಮುದ್ದುಕೃಷ್ಣ ಸ್ಪರ್ಧೆ: 15ರೊಳಗೆ ಮುದ್ದು ಕೃಷ್ಣ ಫೊಟೋ ಕಳಿಸಿ"