: ಜೇಸಿಐ ಜೋಡುಮಾರ್ಗ ನೇತ್ರಾವತಿ ಯು ತನ್ನ ಜೇಸಿ ಸಪ್ತಾಹ 2023 ರ ಪ್ರಯುಕ್ತ ಸಾರ್ವಜನಿಕರಿಗಾಗಿ ಸಮೂಹ ನೃತ್ಯ ಸ್ಪರ್ಧೆಯನ್ನು ಸೆ.15ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಿದೆ. ಸೆ.9ರಿಂದ ಸೆ.15ರವರೆಗೆ ನಾನಾ ಕಾರ್ಯಕ್ರಮಗಳೊಂದಿಗೆ ಜೇಸಿ ಸಪ್ತಾಹ ನಡೆಯಲಿದ್ದು, ಇದರ ಕಾರ್ಯಕ್ರಮ ನಿರ್ದೇಶಕರಾಗಿ ಸುಬ್ರಹ್ಮಣ್ಯ ಪೈ ಕಾರ್ಯನಿರ್ವಹಿಸಲಿದ್ದಾರೆ ಎಂದು ಜೇಸಿ ಅಧ್ಯಕ್ಷೆ ಗಾಯತ್ರಿ ಲೋಕೇಶ್ , ನಿಕಟಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಕಾರ್ಯದರ್ಶಿ ರಮ್ಯಾ ವಿನಾಯಕ ತಿಳಿಸಿದ್ದಾರೆ.
ನೃತ್ಯ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದ್ದು ಪ್ರಥಮ ಬಹುಮಾನ 6000 ಮತ್ತು ದ್ವಿತೀಯ ಬಹುಮಾನ 4000 ದೊರೆಯಲಿದೆ. ಮೊದಲು ನೋಂದಾಯಿಸಿದ 10 ತಂಡಗಳಿಗೆ ಮಾತ್ರ ಅವಕಾಶ. ಎರಡು ಜನರ (ಇಬ್ಬರ ತಂಡ) ನೃತ್ಯ ಸ್ಪರ್ಧೆಯೂ ನಡೆಯಲಿದ್ದು ಪ್ರಥಮ 3000 ಹಾಗು ದ್ವಿತೀಯ 2000 ನಗದು ಬಹುಮಾನವಿದೆ. ಈ ನೃತ್ಯ ಮೊದಲು ನೋಂದಾಯಿಸಿದ 5 ತಂಡಗಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗಾಗಿ ಹಾಗು ಹೆಸರು ನೋಂದಾಯಿಸಲು9741055677, 9901758478 ದೂರವಾಣಿಯನ್ನು ಸಂಪರ್ಕಿಸಲು ಕೋರಲಾಗಿದೆ.
Be the first to comment on "ಜೇಸಿ ಸಪ್ತಾಹ: ಜೋಡುಮಾರ್ಗ ಜೇಸಿಯಿಂದ ವೈವಿಧ್ಯಮಯ ಕಾರ್ಯಕ್ರಮ, ಸೆ.15ರಂದು ನೃತ್ಯಸ್ಪರ್ಧೆ.. ಇಲ್ಲಿದೆ ಸಮಗ್ರ ವಿವರ"