ಮಂಗಳೂರು: ನಗರದ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸಯನ್ಸ್ ಅಂಡ್ ಇನ್ಫಾರ್ಮೇಶನ್ ಸಯನ್ಸ್ನ ಡೀನ್ ಪ್ರೊ. ಸುಬ್ರಹ್ಮಣ್ಯ ಭಟ್ ಇವರ ಇಂಪ್ಲಿಮೆಂಟೇಶನ್ ಅಂಡ್ ಇವಾಲ್ಯುವೇಶನ್ ಆಫ್ ಅಡಾಪ್ಟಿವ್ ಡೈರೆಕ್ಟರಿ ಬೇಸ್ಡ್ ಕ್ಯಾಶ್ಕೊಹರೆನ್ಸಿ ಮಾಡೆಲ್ ಟು ಒಪ್ಟಿಮೈಸ್ ನೆಟ್ವರ್ಕ್ ಬ್ಯಾಂಡ್ ವಿಡ್ತ್ ಎಂಬ ಪ್ರಾಯೋಗಿಕ ಸಂಶೋಧನೆಗೆ ರಾಯಲಸೀಮಾ ಸರಕಾರಿ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ.
ಹೈದರಾಬಾದಿನ ಅನುರಾಗ್ ವಿಶ್ವವಿದ್ಯಾನಿಲಯದ ಡೀನ್ ಪ್ರೊ. ವಿ. ವಿಜಯಕುಮಾರ್ ಹಾಗೂ ಎನ್.ಐ.ಟಿ.ಕೆ.ಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ.ಆರ್.ಕಾಮತ್ ಇವರ ಮಾರ್ಗದರ್ಶನದಲ್ಲಿ ಇವರು ಕೈಗೊಂಡ ಪ್ರಯೋಗದ ಸಾರಾಂಶಗಳು ಯು.ಜಿ.ಸಿ. ಜರ್ನಲ್ಗಳಲ್ಲಿ ಪ್ರಕಟಗೊಂಡಿವೆ. ಅಳಿಕೆ ಹಾಗೂ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಯಾಗಿರುವ ಇವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬಳಂತಿಮೊಗರಿನ ದಿ.ಶ್ಯಾಮ ಭಟ್ ಹಾಗೂ ಸರಸ್ವತಿ ದಂಪತಿ ಪುತ್ರರಾಗಿದ್ದು, ಹುಟ್ಟೂರಲ್ಲಿ ಸಹಜಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
Be the first to comment on "ಪ್ರೊ.ಸುಬ್ರಹ್ಮಣ್ಯ ಭಟ್ ಅವರಿಗೆ ಡಾಕ್ಟರೇಟ್ ಪದವಿ"