ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ರಾಜ್ಯ ಮಟ್ಟದಲ್ಲಿ ಆಚರಣೆಯಾಗುತ್ತಿದ್ದು ಸಮಾಜ ಜಾಗೃತಿ, ಪರಿವರ್ತನೆಯತ್ತ ಹೋಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕಲ್ಬುರ್ಗಿ ಬ್ರಹ್ಮಶ್ರೀ ನಾರಾಯಣ ಶಕ್ತಿ ಪೀಠದ ಪೀಠಾಧಿಪತಿ ಶ್ರೀ ಡಾ. ಪ್ರಣವಾನಂದ ರಾಮ್ ಸ್ವಾಮೀಜಿ ಹೇಳಿದರು.
ಸಜೀಪಮೂಡ ಗ್ರಾಮದ ಸುಭಾಷ್ ನಗರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವರ್ಯರ ೧೬೯ ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ ಗುರುಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಇಂದು ವ್ಯಕ್ತಿ ನಿಷ್ಠೆ, ಪಕ್ಷ ನಿಷ್ಠೆ ಹೆಚ್ಚಾಗಿ ಸಮಾಜ ನಿಷ್ಠೆ ಕಡಿಮೆಯಾಗಿದ್ದು ನಾವೆಲ್ಲರೂ ಬ್ರಹ್ಮಶ್ರೀ ನಾರಾಯಣ ಗುರುಗಳ ಪಕ್ಷ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ ಎಂದರು
ಗೌರವಾಧ್ಯಕ್ಷ ಕೆ. ಸಂಜೀವ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಉಪಾಧ್ಯಕ್ಷ ಜಿತೇಂದ್ರ ಪೂಜಾರಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ವಹಿಸಿದ್ದರು. ಸಜೀಪ ಮಾಗಣೆಯ ಶ್ರೀ ನಾಲ್ಕೈತ್ತಾಯ ದೈವದ ಪಾತ್ರಿ ಶಂಕರ ಯಾನೆ ಕೋಚ ಪೂಜಾರಿ, ನಾಟಿ ವೈದ್ಯರಾದ ಗಂಗಯ ಪೂಜಾರಿ, ವೀರಪ್ಪ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯಶಂಕರ್ ಕಾನ್ಸಲೆ ಸ್ವಾಗತಿಸಿದರು, ಕೋಶಾಧಿಕಾರಿ ರಮೇಶ್ ಅನ್ನಪ್ಪಾಡಿ ವಂದಿಸಿದರು
Be the first to comment on "ಸರಕಾರವೇ ಗುರುಜಯಂತಿ ಆಚರಿಸುವುದು ಸಮಾಜ ಜಾಗೃತಿಗೆ ಸಾಕ್ಷಿ: ಪ್ರಣವಾನಂದ ಸ್ವಾಮೀಜಿ"