ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ 352 ನೇ ಆರಾಧನಾ ಮಹೋತ್ಸವ ಶುಕ್ರವಾರ ನಡೆಯಿತು.
ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನ ದಲ್ಲಿ ಗುರುಪೂಜೆ ಸಹಿತ ವಿಶೇಷ ಪೂಜೆ ಮತ್ತು ಮಂತ್ರಾಕ್ಷತೆ ನೆರವೇರಿತು. ಇದೇ ವೇಳೆ ಶ್ರೀ ಮಹಾಗಣಪತಿ, ಗಾಯತ್ರೀ ದೇವಿ ಮತ್ತು ನಾಗದೇವರಿಗೆ ವಿಶೇಷ ಪೂಜೆ ನಡೆಯಿತು.
ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪ್ರಮುಖರಾದ ಬಿ.ರಘು ಸಪಲ್ಯ ಪಾಣೆಮಂಗಳೂರು, ನಾಗೇಶ ಕಲ್ಲಡ್ಕ, ಉಮೇಶ ಬೋಳಂತೂರು, ಜಯಪ್ರಕಾಶ್ ತುಂಬೆ, ಎಂ.ಬೂಬ ಸಪಲ್ಯ ಮುಂಡಬೈಲು, ನವೀನ ಕೋಟ್ಯಾನ್ ಬಿ.ಸಿ.ರೋಡು, ಕೆ.ಬಾಬು ಸಪಲ್ಯ ವಗ್ಗ, ಮೋಹನ್ ಕೆ.ಶ್ರೀಯಾನ್ ರಾಯಿ, ಜಗದೀಶ ಕುಂದರ್ ಭಂಡಾರಿಬೆಟ್ಟು,ಕೆ.ಟಿ.ಸುಧಾಕರ್ ಇರಾ, ಸೀತಾರಾಮ ಅಗೋಳಿಬೆಟ್ಟು, ಚಂದ್ರಶೇಖರ ಶೆಟ್ಟಿ ವಾಮದಪದವು, ವಿಜಯ ರೈ ಆಲದಪದವು, ದಿನೇಶ ಶೆಟ್ಟಿ ದಂಬೆದಾರು, ವೇದವ ಗಾಣಿಗ, ಜಯರಾಮ ಕುಲಾಲ್ ಉರುಡಾಯಿ, ಶಶಿಕಲಾ ಪೂಜಾರಿ, ಸುಪ್ರೀತಾ ಪೂಜಾರಿ ಪಿಲಿಂಗಾಲು, ಪದ್ಮನಾಭ ಇಡ್ಕಿದು, ಸದಾಶಿವ ಬರಿಮಾರು, ರಂಜಿನಿ ಸುಜಿತ್ ಬಾಳ್ತಿಲ ಮತ್ತಿತರರು ಇದ್ದರು.
Be the first to comment on "ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನ: ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ"