ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಹೊಸ ಭತ್ತದ ತಳಿ ಸಹ್ಯಾದ್ರಿಬ್ರಹ್ಮ ಕುರಿತು ತರಬೇತಿ ಮತ್ತು ಕೃಷಿ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಶಿಫಾರಸ್ಸು ಮಾಡಿರುವ ಎಮ್‌ಓ-೪ ತಳಿಯ ಪರ್ಯಾಯವಾಗಿ ಹೊಸ ಭತ್ತದ ತಳಿ ಸಹ್ಯಾದ್ರಿ ಬ್ರಹ್ಮ ಅಭಿವೃಪಡಿಸಲಾಗಿದ್ದು ಈ ತಳಿಯ ವಿಶೇಷತೆ ಕುರಿತು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರತಜ್ಞರಾದ ಹರೀಶ್ ಶೆಣೈ ಮಾಹಿತಿ ನೀಡಿ ತರಬೇತಿ ನಡೆಸಿಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣುವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ್ ಭತ್ತದಲ್ಲಿ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕರೋಪಾಡಿ ಗ್ರಾಮದ ಪ್ರಗತಿಪರ ಕೃಷಿಕರಾದ ಜಾನ್ ಮೊಂಟೆರಿಯೊ ಇವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಯಾಂತ್ರೀಕೃತವಾಗಿ ನಾಟಿ ಮಾಡಿರುವ ಸಹ್ಯಾದ್ರಿಬ್ರಹ್ಮ ಭತ್ತದ ತಳಿಯನ್ನು ವೀಕ್ಷಿಸಲಾಯಿತು. ಗ್ರಾಮದ ಸುಮಾರು೧೫ ಜನ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
Be the first to comment on "ಕರೋಪಾಡಿ ಗ್ರಾಮದಲ್ಲಿ ಭತ್ತದ ತಳಿ ಕುರಿತ ತರಬೇತಿ"