ಹತ್ತೂರ ತ್ಯಾಜ್ಯ ಸದ್ಬಳಕೆ – ಬಯೋ ಸಿ.ಎನ್.ಜಿ. ಸಾಧ್ಯ ಎಂದು ನಿರೂಪಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪ್ರಗತಿಪರ ಕೃಷಿಕರಾಗಿಯೂ ಪ್ರಸಿದ್ಧರು. ಮಂಗಳೂರು ತಾಲೂಕಿನ ಗಂಜಿಮಠ ಸಮೀಪ ಒಡ್ಡೂರು ಫಾರ್ಮ್ಸ್ ನಲ್ಲಿ ಅವರ ವಿಶಾಲವಾದ ತೋಟವಿದೆ. ಅಲ್ಲಿ ಪ್ರಾಯೋಗಿಕವಾಗಿ ಹಲವು ರೀತಿಯ ವೈವಿಧ್ಯಮಯ ಕೃಷಿ ಚಟುವಟಿಕೆಗಳೊಂದಿಗೆ ಸಾಂಪ್ರದಾಯಿಕ ಕೃಷಿಯನ್ನೂ ಅವರು ಮಾಡುತ್ತಾರೆ. ಇತ್ತೀಚೆಗೆ ತನ್ನ ಜಾಗದಲ್ಲಿ ಸುಮಾರು 60 ಸೆಂಟ್ಸ್ ಜಾಗವನ್ನು ಬಳಸಿಕೊಂಡು, ಹಸಿ ಕಸ, ತ್ಯಾಜ್ಯವನ್ನೆಲ್ಲಾ ಸಂಗ್ರಹಿಸಿ, ಅವುಗಳಿಂದಲೇ ಬಯೊ ಸಿ.ಎನ್.ಜಿ. ಉತ್ಪಾದಿಸುವ ಕಾರ್ಯಕ್ಕೆ ಹೊರಟಿದ್ದಾರೆ. ಅಲ್ಲಲ್ಲಿ ತ್ಯಾಜ್ಯ ಎಸೆಯುವ ಬದಲು ಇಂಥ ಸಣ್ಣ ಘಟಕಗಳನ್ನು ಸರಕಾರವೇ ಮಾಡಬಹುದು ಎನ್ನುತ್ತಾರೆ ನಾಯ್ಕ್.

ಜಾಹೀರಾತು

ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಯೋಸಿಎನ್‌ಜಿ ಒಡ್ಡೂರಿನಲ್ಲಿ ಅನುಷ್ಠಾನಕ್ಕೆ ಬರುತ್ತಿದ್ದು,ಇದರ ಲೋಕಾರ್ಪಣೆಗೆ ಕೇಂದ್ರ,ರಾಜ್ಯ ಪರಿಸರ ಸಚಿವರನ್ನು ಆಹ್ವಾನಿಸಲಾಗುವುದು,ಪ್ರತಿ ಗ್ರಾ.ಪಂ.ಅಥವಾ ಅಕ್ಕಪಕ್ಕದ ಮೂರ್ನಾಲ್ಕು ಗ್ರಾ.ಪಂ.ಒಟ್ಟು ಸೇರಿಕೊಂಡು ಹಾಗೆಯೇ ನಗರಪಾಲಿಕೆ,ಪುರಸಭೆಗಳು  ಇಂತಹ‌ ಘಟಕವನ್ನು ಸ್ಥಾಪಿಸಲು ಆಸಕ್ತಿ ವಹಿಸಿದರೆ ತ್ಯಾಜ್ಯ ವಿಲೇವಾರಿಯ ಬಹುದೊಡ್ಡ ಸಮಸ್ಯೆ ಬಗೆಹರಿಯಲಿದೆಯಲ್ಲದೆ ಆದಾಯವು ಬರಲಿದೆ ಎಂದು‌ ಅವರು ಸಲಹೆ‌ ನೀಡಿದರಲ್ಲದೆ ಸರಕಾರವು ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು ಎಂದರು ನಾಯ್ಕ್ ಯಾರಾದರೂ ಕೃಷಿಕರಿಗೆ ಸಾವಯವ ಗೊಬ್ಬರದ ಅವಶ್ಯಕತೆ ಇದ್ದಲ್ಲಿ ಆ ರೈತನ ತೋಟದ ಮಣ್ಣನ್ನು ಇಲ್ಲಿಯೇ  ಪರೀಕ್ಷಿಸಿ ಆ ಮಣ್ಣಿಗೆನುಗುಣವಾದ ಸತ್ವದ ಗೊಬ್ಬರವನ್ನು ತಯಾರಿಸಿ ನೀಡುವಂತ ಚಿಂತನೆಯನ್ನೂ ಅವರು ಹೊಂದಿದ್ದಾರೆ.ಇದಕ್ಕೆ ಗುಜರಾತ್ ಮಾದರಿ ಎನ್ನುತ್ತಾರೆ ನಾಯ್ಕ್.

ಜಾಹೀರಾತು

ಶಾಸಕ ರಾಜೇಶ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪುತ್ರ ಉನ್ನತ್ ಆರ್. ನಾಯ್ಕ್ ಅವರು ಈ ಘಟಕದ ಉಸ್ತುವಾರಿ ನೋಡಿಕೊಳ್ಳಲಿದ್ದು ರೀಟ್ಯಾಪ್ ಸೋಲುಷನ್ ಸಂಸ್ಥೆ ಇದರ ಪೂರ್ತಿ ನಿರ್ವಹಣೆ ಮಾಡಲಿದೆ.ಸುಮಾರು 60 ಸೆಂಟ್ಸ್ ಜಮೀನಿನಲ್ಲಿ ಈ  ಘಟಕ ಸುಸಜ್ಜಿತ ಹಾಗೂ ವೈಜ್ಞಾನಿಕವಾಗಿ ನಿರ್ಮಾಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆಯು ಆರಂಭಗೊಂಡಿದೆ.

ಜಾಹೀರಾತು

ಸದ್ಯಕ್ಕೆ ನಗರ ಮತ್ತು ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಸಾವಯವ ಗೊಬ್ಬರ ಮತ್ತು ಅನಿಲ ಉತ್ಪಾದನೆ ಮಾಡಲಾಗುತ್ತಿದೆ. 8.50  ಲಕ್ಷ ಲೀ.ಮೀಥೇನ್ ಗ್ಯಾಸ್ ಟ್ಯಾಂಕ್ ಸಾಮರ್ಥ್ಯವನ್ನು‌ ಹೊಂದಿದ್ದು, ದಿನವೊಂದಕ್ಕೆ 500 ರಿಂದ 600 ಕೆ.ಜಿ.ಅನಿಲ ಉತ್ಪಾದನೆಯಾಗಲಿದೆ.ಅದೇ ರೀತಿ 10 ಟನ್ ಹಸಿಕಸದಿಂದ ಅಷ್ಠೆ ಪ್ರಮಾಣದ ಉತ್ಕೃಷ್ಟವಾದ ಗೊಬ್ಬರವು ಲಭ್ಯವಾಗುತ್ತದೆ.ಅನಿಲವನ್ನು ಅಡುಗೆ, ವಾಹನ,ಇನ್ನಿತರ ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಸುದ್ದಿಗಾರರಿಗೆ ವಿವರಿಸಿದರು.

ಜಾಹೀರಾತು

ಘಟಕಕ್ಕೆ ಸುಮಾರು‌1 ಲಕ್ಷ ಲೀ.ನೀರಿನ ಅವಶ್ಯಕತೆ ಇದ್ದು, ಇದನ್ನು ಕೂಡ ಎರಡು ಕಿ.ಮೀ.ದೂರದಲ್ಲಿರುವ ಕೋಳಿ ಅಂಗಡಿಗಳ ಸಹಿತ ಪಕ್ಕದ ಪ್ಯಾಕ್ಟರಿಯೊಂದರ ತ್ಯಾಜ್ಯ ನೀರನ್ನೇ ಬಳಸಲಾಗುತ್ತದ್ದು, ಪೈಪ್ ಲೈನ್ ಮೂಲಕವೇ ಘಟಕಕ್ಕೆ ಪೂರೈಕೆಯಾಗುತ್ತದೆ. ಬಳಿಕ ಸಂಸ್ಕರಿಸಿದ ಈ ನೀರನ್ನು ತೋಟಕ್ಕೆ ಬಳಸಲಾಗುತ್ತದೆ. ಇದರಿಂದಾಗಿ ಪರಿಸರ ಪೂರ್ತಿ ಹಚ್ಚ ಹಸಿರಾಗಿಯೇ (ಗ್ರೀನ್ ಲ್ಯಾಂಡ್) ಉಳಿಯುತ್ತದೆ ಎಂದರು.

ತ್ಯಾಜ್ಯ ವಿಲೇವಾರಿ‌ ಸಮಸ್ಯೆ ಇದೀಗ ಬಯೋಸಿಎನ್‌ಜಿ ಘಟಕವನ್ನು ಕಾರ್ಯರೂಪಕ್ಕೆ ತರುವಂತಾಗಿದೆ.ಪುರಸಭೆಯ ಹಸಿಕಸವನ್ನು ಇಲ್ಲಿ ಬಳಸಲಾಗುತ್ತದೆ.ತರಕಾರಿ ಸಹಿತ ಪೂರ್ತಿ ಹಸಿಕಸವನ್ನು ಮಾತ್ರ ಇಲ್ಲಿ ಬಳಸಲಾಗುತ್ತಿದೆ.ರೀಟ್ಯಾಪ್ ಸೋಲುಷನ್ ಸಂಸ್ಥೆಯ 6 ಮಂದಿ ಸಿಬ್ಬಂದಿಗಳು ಖಾಯಂ ಇದ್ದು,ಕಾರ್ಯನಿರ್ವಹಿಸುತ್ತಾರೆ.ಹಾಗಯೇ ಮೂರು ಮಂದಿ ನಮ್ಮನೌಕರರು ಹಸಿ ಮತ್ತು ಒಣಕಸ ಪ್ರತ್ಯೇಕಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು. ಶಾಸಕರು ಸುದ್ದಿಗಾರರಿಗೆ ಸಿ.ಎನ.ಜಿ. ಕುರಿತ ಮಾಹಿತಿ ನೀಡುವ ವೇಳೆ ಘಟಕದ ಮುಖ್ಯಸ್ಥ ಉನ್ನತ್ ಆರ್ ನಾಯ್ಕ್, ಪ್ರಮುಖರಾದ ದೇವದಾಸ ಶೆಟ್ಟಿ ಬಂಟ್ವಾಳ, ಸುದರ್ಶನ್ ಬಜ,ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ,ನಂದರಾಮ ರೈ,ಚರಣ್ ಜುಮಾದಿಗುಡ್ಡೆ, ಸುಷ್ಮಾ ಚರಣ್, ಪವನ್ ಕುಮಾರ್ ಶೆಟ್ಟಿ, ಪ್ರಣಾಮ್ ಅಜ್ಜಿಬೆಟ್ಟು ಮೊದಲಾದವರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಹತ್ತೂರ ತ್ಯಾಜ್ಯ ಸದ್ಬಳಕೆ – ಬಯೋ ಸಿ.ಎನ್.ಜಿ. ಸಾಧ್ಯ ಎಂದು ನಿರೂಪಿಸಿದ ಶಾಸಕ ರಾಜೇಶ್ ನಾಯ್ಕ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*