ಬಂಟ್ವಾಳದಲ್ಲಿ ನೇತ್ರಾವತಿ ನದಿ 7.9 ಮೀಟರ್ ಎತ್ತರದಲ್ಲಿ ಹಲವೆಡೆ ನೆರೆಭೀತಿ ಇದೆ. ಈ ಮಧ್ಯೆ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಪತ್ರಿಕೆಗಳಿಗೆ ನೀಡಿದ ಮಾಹಿತಿ ಹೀಗಿದೆ.
ಬೆಳಗ್ಗೆ 5-45 ಶಿಕ್ಷಣ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಬಿಆರ್ ಸಿ ಮತ್ತು ಸಿಆರ್ ಸಿ ಹಾಗೂ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ವ್ಹಿ.ಸಿ.ಮುಖಾಂತರ ಚರ್ಚೆ ಮಾಡಿದ ತರುವಾಯ ರಜೆ ಘೋಷಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿರುವ ಅವರು, ಹಯತುಲ್ ಶಾಲೆ ಗೂಡಿನ ಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದ ಮತ್ತು ಎಸ್ ಎಲ್ ಎನ್ ಪಿ ಪಾಣೆಮಂಗಳೂರು ,ಎಲ್ ಸಿ ಆರ್ ಕಕ್ಕೆ ಪದವು, ಕೆಪಿಎಸ್ ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ ಎ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಪೆರ್ಲಬಿಯಪಾದ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು, ಎರ್ಮಾಳ್ ಪದವು ಮಜ್ಲಿಸ್ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಇತರ ಶಾಲೆ ಪ್ರತಿ ದಿನದಂತೆ ಪ್ರಾರಂಭವಾಗುತ್ತದೆ ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "BANTWAL: UPDATE- ಬಂಟ್ವಾಳದಲ್ಲಿ ಯಾವುದೆಲ್ಲಾ ಶಾಲೆಗಳಿಗೆ ರಜೆ? ತಹಸೀಲ್ದಾರ್ ನೀಡಿರುವ ಮಾಹಿತಿ ಇಲ್ಲಿದೆ"