ಬಂಟ್ವಾಳ ತಾಲೂಕಿನಲ್ಲಿ ನೆರೆಪೀಡಿತ ಪ್ರದೇಶಗಳು ಹಾಗೂ ನೇತ್ರಾವತಿ ನದಿ ನೀರಿನ ಮಟ್ಟವನ್ನು ಭಾನುವಾರ ಮಂಗಳೂರು ಸಹಾಯಕ ಆಯುಕ್ತ ಡಾ. ಹರ್ಷವರ್ಧನ ಪರಿಶೀಲನೆ ನಡೆಸಿದರು. ಈ ಸಂದರ್ಭ ಬಂಟ್ವಾಳ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.
ನೆರೆಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಗ್ರಾಮದ ಆಲಡ್ಕ, ಪಡ್ಪು ಬಿ.ಮೂಡ ಗ್ರಾಮದ ಬಸ್ತಿಪಡ್ಪು, ಬಂಟ್ವಾಳದ ಮಣಿಹಳ್ಳ, ಮೈಂದಾಳ ಹಾಗೂ ಇನ್ನಿತರ ಮುಳುಗಡೆ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿರುವ ಮನೆಯವರಿಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಲುಸೂಚಿಸಿದರು. ಬಳಿಕ ಪಾಣೆ ಮಂಗಳೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕರಾದ ವಿಜಯ್.ಆರ್, ಗ್ರಾಮ ಆಡಳಿತ ಆಧಿಕಾರಿ ಮತ್ತಿಹಳ್ಳಿ ಪ್ರಕಾಶ್, ಅಶ್ವಿನಿ, ಸಿಬ್ಬಂದಿ ಸದಾಶಿವ ಕೈಕಂಬ, ಯಶೋಧಾ, ಶಿವಪ್ರಸಾದ್, ಸಂದೇಶ್ ಹಾಜರಿದ್ದರು.
Be the first to comment on "ಬಂಟ್ವಾಳದ ನೇತ್ರಾವತಿ ನೀರಿನ ಮಟ್ಟ, ನೆರೆಪೀಡಿತ ಪ್ರದೇಶಗಳಿಗೆ ಸಹಾಯಕ ಆಯುಕ್ತರ ಭೇಟಿ, ಪರಿಶೀಲನೆ"