ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ). ಬಂಟ್ವಾಳ ವಲಯದ ಅಧ್ಯಕ್ಷರಾಗಿ ಬಿ.ಸಿ.ರೋಡಿನ ಪ್ರೀತಿ ಸ್ಟುಡಿಯೋ ಮಾಲೀಕ ಕಿಶೋರ್ ಎಸ್. ಕುಮಾರ್ ಆಯ್ಕೆಯಾಗಿದ್ದಾರೆ.

ಕಿಶೋರ್ ಕುಮಾರ್
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ಮಹಾಸಭೆ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ಈ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು,

PRASHANTH KALLADKA

ವರುಣ್ ಕಲ್ಲಡ್ಕ
ಅಧ್ಯಕ್ಷರಾಗಿ ಕಿಶೋರ್ ಎಸ್ ಕುಮಾರ್, ಪ್ರೀತಿ ಸ್ಟುಡಿಯೋ ಬಿ. ಸಿ. ರೋಡ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಕಲ್ಲಡ್ಕ, ಗೌರವ ಅಧ್ಯಕ್ಷರಾಗಿ ಹರೀಶ್ ಕುಂದರ್, ಉಪಾದ್ಯಕ್ಷರಾಗಿ ಲಕ್ಷ್ಮಣ್ ಮೆಲ್ಕಾರ್, ಹಾಗೂ ವಿಕೇಶ್ ಬಂಟ್ವಾಳ, ಕೋಶಾಧಿಕಾರಿಯಾಗಿ ವರುಣ್ ಕಲ್ಲಡ್ಕ, ಜತೆ ಕಾರ್ಯದರ್ಶಿಯಾಗಿ ರಿಚರ್ಡ್ ಹಾಗೂ ವಿವೇಕ್ ಅಮ್ಟಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಕಲ್ಲಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ್ ಏಕದಂತ ಹಾಗೂ ಹರೀಶ್ ಕನ್ಯಾನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಂತೋಷ್ ಕೊಯಿಲ, ಮಾಧ್ಯಮ ಪ್ರತಿನಿಧಿಯಾಗಿ ಹರೀಶ್ ನಾಟಿ, ಛಾಯಾ ಕಾರ್ಯದರ್ಶಿಯಾಗಿ ಶ್ರೀಪ್ರಸಾದ್, ಆಯ್ಕೆಯಾಗಿದ್ದಾರೆ.
Be the first to comment on "ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯಾಧ್ಯಕ್ಷರಾಗಿ ಕಿಶೋರ್ ಎಸ್.ಕುಮಾರ್ ಆಯ್ಕೆ"