ಬಂಟ್ವಾಳ ತಾಲೂಕಿನ ತುಂಬೆ ಡ್ಯಾಮ್ ನಿರ್ಮಾಣದ ಸವಕಳಿ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ, ವರತೆ ಪ್ರದೇಶಕ್ಕೆ ಪರಿಹಾರ ಸಹಿತ ನಾನಾ ಬೇಡಿಕೆಗಳು ಇರುವ ಮನವಿಯೊಂದನ್ನು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ರೈತಸಂಘ ಹಸಿರುಸೇನೆ ನೀಡಿತು. ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ನೇತೃತ್ವದ ನಿಯೋಗ ಸ್ಪೀಕರ್ ಭೇಟಿಗೆ ತೆರಳಿತ್ತು.
ಜಾಹೀರಾತು
ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಂ. ಸುಬ್ರಮಣ್ಯ ಭಟ್ ಕಾರ್ಯದರ್ಶಿಕೆ ಇದಿನಬ್ಬ, ಭಾಸ್ಕರ, ಮೊಯ್ದಿನಬ್ಬ, ಲೋಕಯ್ಯ, ದಿಲೀಪ್ ರೈ, ಸವಿತಾ, ದೇವಕಿ, ಪುರುಷೋತ್ತಮ, ಗಂಗಾಧರ ಮೊದಲಾದವರಿದ್ದರು.. ತುಂಬೆ ಡ್ಯಾಮ್ ನಿರ್ಮಾಣದಿಂದ ಸವಕಳಿ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರ, ವರತೆ ಪ್ರದೇಶಕ್ಕೆ ಪರಿಹಾರ, ನದೀತೀರದ ಪಂಪಸೆಟ್ ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಆದೇಶ ರದ್ದತಿ, ಕುಮ್ಕಿ ಹಕ್ಕಿನ ಬಗ್ಗೆ ಲಿಖಿತ ಮನವಿ ಸಲ್ಲಿಸಲಾಯಿತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ರೈತರ ಸಮಸ್ಯೆ ಬಗೆಹರಿಸಲು ಸ್ಪೀಕರ್ ಗೆ ರೈತಸಂಘ ಮನವಿ"