ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2023ರ ಅಂಗವಾಗಿ ಜನ್ಮದಿನೋತ್ಸವ ಸಮಿತಿಯು ಆಯೋಜಿಸಿದ ಸ್ಪರ್ಧೆಗಳನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿ, ಸ್ಪರ್ಧೆಗಳ ಆಯೋಜನೆಯಿಂದ ಮನುಷ್ಯ ಮನುಷ್ಯನ ನಡುವಿನ ಕೊಂಡಿ, ಸಂಬಂಧ ಬಲಪಡಿಸುವ ಕೆಲಸವಾಗುತ್ತದೆ. ಬುದ್ಧಿಯ ವಿಕಾಸಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಇಂತಹ ಒಳಾಂಗಣ ಸ್ಪರ್ಧೆಗಳು ಅವಶ್ಯ. ಬುದ್ಧಿಗೆ ಸ್ವಲ್ಪ ಚುರುಕು ಮುಟ್ಟಿಸಲು ಪೂರಕವಾಗಿರುತ್ತದೆ. ಆ ಮೂಲಕ ಮಾನವೀಯ ಮೌಲ್ಯ ವರ್ಧನೆಯೂ ಆಗುವುದು. ಬದುಕಿನಲ್ಲಿ ಸದ್ವಿಚಾರಗಳಲ್ಲಿ ತೊಡಗಿಸಿಕೊಂಡಾಗ ಜೀವನ ಸುಲಲಿತವಾಗಬಹುದು ಎಂದು ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಜನ್ಮದಿನೋತ್ಸವ ಸಮಿತಿಯ ಕೋಶಾಧಿಕಾರಿ ಎ. ಸುರೇಶ್ ರೈ, ಜತೆ ಕೋಶಾಧಿಕಾರಿ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ, ಉಪಸ್ಥಿತರಿದ್ದರು.
ವಿದ್ಯಾಪೀಠದ ವಿದ್ಯಾರ್ಥಿನಿಯರ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸಂಚಾಲಕ ಸೇರಾಜೆ ಗಣಪತಿ ಭಟ್ ಸ್ವಾಗತಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಮಿತಿಯ ಸಂಚಾಲಕ ಮಾತೇಶ್ ಭಂಡಾರಿ ವಂದಿಸಿದರು.
Be the first to comment on "ಬುದ್ಧಿಯ ವಿಕಾಸಕ್ಕೆ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಸ್ಪರ್ಧೆಗಳು ಪೂರಕ: ಒಡಿಯೂರು ಶ್ರೀಗಳು"