ಬಂಟ್ವಾಳ: ಬಿಜೆಪಿ ಸರಕಾರದ ತುಷ್ಟೀಕರಣ ನೀತಿಯಿಂದಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದ್ದು, ಜೆಡಿಎಸ್ ಒಂದೇ ಎಲ್ಲರನ್ನೂ ಸಮಪ್ರಮಾಣದಲ್ಲಿ ಕಾಣುತ್ತಾ, ಸರ್ವಜನಾಂಗದ ಹಿತ ಬಯಸುತ್ತದೆ ಎಂದು ದ.ಕ.ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಹಾರೂನ್ ರಶೀದ್ ಹೇಳಿದ್ದಾರೆ.
ಬಂಟ್ವಾಳದ ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೊಮ್ಮಾಯಿ ಸರಕಾರ ತನ್ನ ಕೊನೇ ಅವಧಿಯಲ್ಲಿ ಸಂಪೂರ್ಣವಾಗಿ ಅಲ್ಪಸಂಖ್ಯಾತ ವಿರೋಧಿ ಧೋರಣೆ ಕೈಗೊಂಡಿದೆ. ದೇವೇಗೌಡ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅಲ್ಪಸಂಖ್ಯಾತರಿಗೆ ಪೂರಕವಾಗಿ ಕೆಲಸಗಳನ್ನು ಮಾಡಿದ್ದರು ಎಂದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಸಂಘಟನಾ ಕಾರ್ಯದರಶಿ ಉಮೇಶ್ ಕುಮಾರ್ ವೈ, ಬಂಟ್ವಾಳ ಜೆಡಿಎಸ್ ಅಭ್ಯರ್ಥಿ ಪ್ರಕಾಶ್ ಗೋಮ್ಸ್, ಪ್ರಮುಖರಾದ ರಫೀಕ್ ಆಲಡ್ಕ, ಜೋನ್, ಇಬ್ರಾಹಿಂ, ನವಾಜ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಜೆಡಿಎಸ್ ಎಲ್ಲರನ್ನೂ ಸಮಾನವಾಗಿ ನೋಡುವ ಪಕ್ಷ: ಹಾರೂನ ರಶೀದ್"