ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ಪುತ್ತೂರಿನಲ್ಲಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ್ತು ಕಾರ್ಕಳದಲ್ಲಿ ಅಭ್ಯರ್ಥಿ ಸುನಿಲ್ ಕುಮಾರ್ ಪರ ಪ್ರಚಾರ ಮಾಡಿದರು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜತೆಗಿದ್ದರು.
ರಾಮನ ಅಸ್ತಿತ್ವ ಪ್ರಶ್ನೆ ಮಾಡಿದ ಕಾಂಗ್ರೆಸ್ ನ ಇಬ್ಬಗೆ ನೀತಿ ಅನುಸರಿಸುತ್ತಿದ್ದು, ಜಾಗರೂಕರಾಗಿರಿ ಎಂದು ಹೇಳಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ 2024ಕ್ಕೆ ಆಗಲಿದ್ದು, ಕರ್ನಾಟಕದ ಜನರ ಸಹಕಾರ, ಕೊಡುಗೆ ದೊಡ್ಡದಿದೆ ಎಂದರು.
ಪುತ್ತೂರಿನ ಮುತ್ತಿನಂಥ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಯೋಗಿ ಆದಿತ್ಯನಾಥ್, ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದ ವರೆಗೆ ಇದ್ದವನು ಹನುಮಂತ, ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿದೆ, ಕರ್ನಾಟಕ ಸರಕಾರ ಕೂಡಾ ಅಂಜನೇಯನ ದೇವಸ್ಥಾನ ಮಾಡುತ್ತಿದೆ ಎಂದರು. ಕಾರ್ಕಳದಲ್ಲಿ ಸುನಿಲ್ ಕುಮಾರ್ ಪರ ಮತಯಾಚನೆ ಮಾಡಿದ ಯೋಗಿ, ಅಲ್ಲಿಯೂ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿದರು. ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಬೇಕು ಎಂದಿದ್ದರೆ, ರಾಜ್ಯದಲ್ಲಿ ಸುಭದ್ರ ಬಿಜೆಪಿ ಸರಕಾರ ಬರಬೇಕು ಎಂದು ಯೋಗಿ ಹೇಳಿದರು.
Be the first to comment on "ಪುತ್ತೂರು, ಕಾರ್ಕಳದಲ್ಲಿ ಯೋಗಿ: ರೋಡ್ ಶೋ, ಸಾರ್ವಜನಿಕ ಸಭೆ"