
ಈ ಬಾರಿ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಕೋವಿಡ್ ಪೀಡಿತರ ಮನೆಗಳಿಗೆ ಮತಗಟ್ಟೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ತೆರಳಿ ಮತದಾನ ಮಾಡಿಸುವ ಯೋಜನೆ ರೂಪಿಸಿದ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ ಮೂಡ ಗ್ರಾಮದ ಕಂಚಿಕಾರ ಪೇಟೆ ಎಂಬಲ್ಲಿ 100 ವರ್ಷದ ಕಲ್ಯಾಣಿ ಆಚಾರ್ಯ ಸೌಲಭ್ಯದ ಸದುಪಯೋಗ ಪಡೆದು ಮತ ಚಲಾಯಿಸಿದರು.
ಎಂಭತ್ತು ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಚುನಾವಣಾ ಆಯೋಗದ ನಿರ್ದೇಶನದಂತೆ 205- ಬಂಟ್ವಾಳ ವಿಧಾನಸಭಾ ಕ್ಷೇತ್ರದ 25 ಸೆಕ್ಟರ್ ವ್ಯಾಪ್ತಿಯಲ್ಲಿ ಅಂಚೆ ಮತದಾನ ತಂಡಗಳು ಮತದಾರರ ಮನೆಗಳಿಗೆ ತೆರಳಿದವು. ಓರ್ವ ಮೈಕ್ರೋ ವೀಕ್ಷಕರು, ಇಬ್ಬರು ಪೋಲಿಂಗ್ ಅಧಿಕಾರಿಗಳು , ಓರ್ವ ವೀಡಿಯೋ ಗ್ರಾಫರ್, ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿಗಳ ತಂಡವು ಪ್ರತಿ ಅರ್ಹ ಮತದಾದರರ ಮನೆಗೆ ತೆರಳಿ ಮನೆಯಿಂದಲೇ ಮತದಾನ ಮಾಡಿಸುವ ಸಲುವಾಗಿ ಈ ಕ್ರಮವನ್ನು ಆಯೋಗವು ಜಾರಿ ಮಾಡಿದೆ. ಬಂಟ್ವಾಳ ವ್ಯಾಪ್ತಿಯಲ್ಲಿ ಚುನಾವಣಾ ತಂಡಗಳನ್ನು ಅಗತ್ಯ ನಿರ್ದೇಶನ ನೀಡಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಆಬಿದ್ ಗದ್ಯಾಲ್ , ಸಹಾಯಕ ಚುನಾವಣಾ ಅಧಿಕಾರಿ ಕೂಡಲಿಗಿ , ನೋಡಲ್ ಅಧಿಕಾರಿ ಸುನಿತಾ ಕುಮಾರಿ, ಮಾಸ್ಟರ್ ಟ್ರೈನರ್ ಅಬ್ದುಲ್ ರಝಾಕ್, ಉಪತಹಶೀಲ್ದಾರ್ ಗಳಾದ ನವೀನ್ ಕುಮಾರ್, ರಾಜೇಶ್ ನಾಯ್ಕ್ , ನರೇಂದ್ರ ನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Be the first to comment on "ಮತದಾನ ಮಾಡಿದ ಶತಾಯುಷಿ, ಬಂಟ್ವಾಳದಲ್ಲಿ ಹಿರಿಯರ ಮತಚಲಾವಣೆ ಪ್ರಕ್ರಿಯೆ ಯಶಸ್ವಿ"